ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡ್ತಿದ್ದಾರೆ ಪ್ರಧಾನಿ
ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯು ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡ್ತಿದೆ. 2020ರೊಳಗೆ 100 ಕೋಟಿ ಉದ್ಯೋಗ ಸೃಷ್ಟಿಸಲಿದೆ. ನೀತಿ ಆಯೋಗದ ಮಹಾ ನಿರ್ದೇಶಕ ಹಾಗೂ ಸಲಹೆಗಾರ ಅನಿಲ್ ಶ್ರೀವಾಸ್ತವ್ ಹೇಳಿದ್ದಾರೆ.
ನಾಲ್ಕನೇ ತಾಂತ್ರಿಕ ಕ್ರಾಂತಿಯಲ್ಲಿ ಮುನ್ನಡೆಯುತ್ತಿದ್ದೇವೆ. ಇದ್ರಲ್ಲಿ ಸಾಕಷ್ಟು ತಂತ್ರಜ್ಞಾನ ಬಳಸಲಾಗ್ತಿದೆ. ಮೇಕ್ ಇಂಡಿಯಾ ಮೂಲಕ ಭಾರತ 2020ರ ವೇಳೆಗೆ 100 ಕೋಟಿ ಹೊಸ ಉದ್ಯೋಗ ಸೃಷ್ಟಿಸಲಿದೆ ಎಂದು ಶ್ರೀವಾಸ್ತವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ ಸರ್ಕಾರ ಉತ್ಪಾದನಾ ಕ್ಷೇತ್ರದ ಮೇಲೆ ಹೆಚ್ಚು ಗಮನನೆಟ್ಟಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
Comments