ಮನೋಹರ್ ಪರಿಕ್ಕರ್ ಜತೆ ಮಾತುಕತೆ ಬೇಕಿಲ್ಲ, ನೀರು ಬಿಡಿ : ಕುಮಾರಸ್ವಾಮಿ

ಮಹದಾಯಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜತೆ ಮಾತುಕತೆ ಬೇಕಿಲ್ಲ. ನೀರು ಬಿಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಮನೋಹರ್ ಪರಿಕ್ಕರ್ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, 'ಚುನಾವಣೆ ಸಂದರ್ಭದಲ್ಲಿ ಈ ಪತ್ರವನ್ನು ಬರೆಯುವ ಮೂಲಕ ಬಿಜೆಪಿ ಕರ್ನಾಟಕದ ಜನತೆಗೆ ಟೋಪಿ ಹಾಕಲು ಹೊರಟಿದೆ. ಇದಕ್ಕೆ ಜನತೆ ಮನ್ನಣೆ ನೀಡುವುದಿಲ್ಲ. ಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಅಥವಾ ಜಲ ಸಂಪನ್ಮೂಲ ಸಚಿವರಿಗೆ ಬರೆಯಬೇಕೆ ಹೊರತು ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ಅಲ್ಲ' ಎಂದರು.
Comments