ರಾಷ್ಟೀಯ ಪಕ್ಷಗಳು ಸರ್ಕಾರ ರಚಿಸಲು ಜೆಡಿಎಸ್ ಸಹಕಾರ ಬೇಕು

ಹೌದು, ಕಾಂಗ್ರೆಸ್ ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಕಾರಣಕ್ಕೆ ಬಲಿಷ್ಠವಾಗಿದ್ದರೂ ಇಲ್ಲಿ ಜೆಡಿಎಸ್ ಕೂಡ ಗಟ್ಟಿಯಾಗಿದ್ದು ಕಾಂಗ್ರೆಸ್ ಹಾದಿ ಸುಗಮವಾಗಿಲ್ಲ. ಈಗಾಗಲೇ ಸಮೀಕ್ಷೆಗಳು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸರಕಾರ ರಚಿಸಲು ಜೆಡಿಎಸ್ ಸಹಕಾರ ಬೇಕಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಮತಗಳನ್ನು ಯಾರು ಬ್ಯಾಲೆನ್ಸ್ ಮಾಡುತ್ತಾರೋ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಕರ್ನಾಟದದಲ್ಲಿ 70 ನಗರ ಪ್ರದೇಶದ ಸೀಟುಗಳಿದ್ದರೆ 154 ಗ್ರಾಮೀಣ ಕ್ಷೇತ್ರಗಳಿವೆ. ಇದರಲ್ಲಿ 28 ಕ್ಷೇತ್ರಗಳು ಬೆಂಗಳೂರು ನಗರದಲ್ಲೇ ಇವೆ. ಉಳಿದ ನಗರ ಪ್ರದೇಶದ ಕ್ಷೇತ್ರಗಳು ನಗರ ಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಬರುತ್ತದೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ನಗರ ಪ್ರದೇಶದ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ರಾಜ್ಯ ರಾಜಕೀಯದಲ್ಲಿ ಪ್ರಮುಖ ತಿರುವು ಉಂಟು ಮಾಡಿದೆ. ಗ್ರಾಮೀಣ ಮತಗಳ ಮೇಲೆ ಚುನಾವಣೆ ಗೆಲ್ಲಬಹುದು ಎಂಬ ಚಿತ್ರಣವನ್ನೇ ಇದು ಬದಲಾಯಿಸಿದೆ. ಜೆಡಿಎಸ್ ಕೂಡಾ ಇದೇ ರೀತಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಜೆಡಿಎಸ್ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಒಟ್ಟಾಗಿ ಬೆಳಕು ಚೆಲ್ಲುತ್ತಿದೆ.
Comments