ಯಡಿಯೂರಪ್ಪ ಅವರಿಗೆ ಕೃತಜ್ಞತೆ ಅರ್ಪಿಸಿರುವ ಕುಮಾರಣ್ಣ

ಮಹದಾಯಿ ವಿವಾದವನ್ನು ಬಗೆಹರಿಸುವ ಭರವಸೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಹೇಳಿರುವ ಕುಮಾರಸ್ವಾಮಿಯವರು, ಮಹದಾಯಿ ವಿಷಯವನ್ನು ಬಳಸಿಕೊಂಡು ಬಿಜೆಪಿ ನಾಟಕವಾಡಬಾರದು ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರು ಪ್ರಚಾರ ಕಾರ್ಯಗಳಲ್ಲಿ ಚುರುಕುಗೊಂಡಿದ್ದು, ಈ ನಡುವೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಹದಾಯಿ ವಿಷಯವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡು ನಾಟಕವಾಡಬಾರದು. ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಕಾರ್ಯೋನ್ಮುಖವಾಗಬೇಕು. ವಿವಾದವನ್ನು ಬಗೆಹರಿಸುವ ಬಗ್ಗೆ ಹೇಳಿಕೆ ನೀಡಲಾಗುತ್ತಿದೆ. ಕೇವಲ ತೋರಿಕೆಗೆ ಹಾಗೂ ಮತದಾರರನ್ನು ಓಲೈಸುವ ತಂತ್ರವಾಗಿ ವಿವಾದವನ್ನು ಬಿಜೆಪಿ ಬಳಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ. ಚುನಾವಣೆಗೆ 3-4 ತಿಂಗಳುಗಳಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಮಹದಾಯಿ ವಿವಾದವನ್ನು ಇತ್ಯರ್ಥಪಡಿಸುತ್ತೇವೆಂದು ಉತ್ತರ ಕರ್ನಾಟಕ ಜನತೆಗೆ ಬಿಜೆಪಿ ಭರವಸೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಿಗೆ ಅಭಿನಂದಿಸುತ್ತೇನೆ. ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅವರು ರ್ಯಾಲಿ ನಡೆಸುತ್ತಿದ್ದು, ಈ ರೀತಿಯ ಘೋಷಣೆಗಳು ಅನಿವಾರ್ಯ ಎಂದಿದ್ದಾರೆ.
Comments