ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಸೋತಿದೆ. ರಾಹುಲ್ ಗಾಂಧಿ ನಾಯಕತ್ವಕ್ಕೆ ಸಿಕ್ಕ ಬೆಂಬಲ ಅಂದ್ರು ಸಿಎಂ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಅಲೆ ಕುಗ್ಗುತ್ತಿದೆ ಎನ್ನುವುದಕ್ಕೆ ಗುಜುರಾತ್ ಚುನಾವಣಾ ಸಾಕ್ಷಿ.
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಅಲೆ ಕುಗ್ಗುತ್ತಿದೆ ಎನ್ನುವುದಕ್ಕೆ ಗುಜುರಾತ್ ಚುನಾವಣಾ ಸಾಕ್ಷಿ. ಗುಜರಾತ್ ನಲ್ಲಿ 44 ಸ್ಥಾನ ಹೊಂದಿದ್ದ ಕಾಂಗ್ರೆಸ್ ಇದೀಗ 80 ಸ್ಥಾನಕ್ಕೆ ಹೆಚ್ಚಾಗಿದೆ. ತನ್ಮೂಲಕ ಗುಜರಾತ್ ನಲ್ಲಿ ನಿಜವಾಗಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಸೋತಿದೆ.
ರಾಹುಲ್ ಗಾಂಧಿ ನಾಯಕತ್ವಕ್ಕೆ ಸಿಕ್ಕ ಬೆಂಬಲ ಇದಾಗಿದೆ ಎಂದರು.ಬಿಜೆಪಿ ಕೆಲ ನಾಯಕರು ಕಾಂಗ್ರೆಸ್ ಗೆ ಬರಲು ಸಿದ್ಧರಿದ್ದಾರೆ. ಸಂಪರ್ಕದಲ್ಲಿ ಕೂಡಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಪರಿವರ್ತನಾ ಯಾತ್ರೆ ಮಾಡುತ್ತಿರುವ ಬಿಜೆಪಿ ಅವರು ತಮ್ಮನ್ನು ತಾವೇ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಬನಹಟ್ಟಿಯಲ್ಲಿ ಮಂಗಳವಾರ ಜನಾರ್ಶೀರ್ವಾದ ಯಾತ್ರೆಯಲ್ಲಿ ಅವರು ಮಾತನಾಡಿದರು. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ' ಎನ್ನುತ್ತಿರುವ ಮೋದಿ ಅಮಿತ್ ಶಹಾ ಮುಸ್ಲಿಂರನ್ನು ದೂರು ವಿಡುತ್ತಿದ್ದಾರೆ. ಅವರು ಪಕ್ಷದವರು ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
Comments