ಯಾವುದೇ ಪ್ರಧಾನಮಂತ್ರಿ ಮಾಡದ್ದನ್ನು ಮೋದಿಯವರು ಮಾಡಿದ್ದಾರೆ : ಎಚ್ ಡಿಕೆ ವ್ಯಂಗ್ಯ
ದೇಶದ ಇದುವರೆಗಿನ ಇತಿಹಾಸವನ್ನು ನೋಡುವುದಾದರೆ ಇದುವರೆಗಿನ ಯಾವುದೇ ಪ್ರಧಾನಮಂತ್ರಿ ಮಾಡದ್ದನ್ನು ಮೋದಿಯವರು ಮಾಡಿದ್ದಾರೆ. ಅವರದ್ದೇ ನಾಡಿನಲ್ಲಿ ಹದಿನೈದು ದಿನಗಳಲ್ಲಿ ಎಪ್ಪತ್ತು ಬಹಿರಂಗ ಸಭೆ ನಡೆಸಿದ ಏಕೈಕ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಕಳೆದ ಭಾರಿ ಬಿಜೆಪಿ ಗೆದ್ದಿದ್ದು 115 ಕ್ಷೇತ್ರವನ್ನು ಮತ್ತು ಹದಿನಾರು ಬಂಡಾಯ ಕಾಂಗ್ರೆಸ್ಸಿಗರು ಬಿಜೆಪಿಯನ್ನು ಸೇರಿದ್ದರು, ಹಾಗಾಗಿ ಬಿಜೆಪಿಯ ಒಟ್ಟು ಲೆಕ್ಕ 131. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಒಂದು ವೇಳೆ 120 ಕ್ಷೇತ್ರವನ್ನು ಗೆದ್ದಿದ್ದರೆ ಅದನ್ನು ಗೆಲುವು ಎನ್ನಬಹುದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಗುಜರಾತಿಗರ ವಿಶ್ವಾಸಗಳಿಸಲು ಪ್ರಧಾನಿಗಳು ಹರಸಾಹಸವನ್ನು ಪಟ್ಟಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಂತ ಹಂತವಾಗಿ ಸೋಲು ಅನುಭವಿಸುತ್ತಲೇ ಬರುತ್ತಿದೆ. ಗುಜರಾತ್ ಚುನಾವಣೆಯಲ್ಲಿ ಮೂರು ಯುವ ಶಕ್ತಿಗಳು (ಅಲ್ಪೇಶ್, ಜಿಗ್ನೇಶ್, ಹಾರ್ದಿಕ್ ) ಸರಕಾರದ ವಿರುದ್ದ ಸಂಘಟನಾತ್ಮಕವಾಗಿ ಹೋರಾಡಿ ಅದರ ಶಕ್ತಿಯನ್ನು ಕಾಂಗ್ರೆಸ್ಸಿಗೆ ಧಾರೆ ಎರೆದಿದ್ದಾರೆ.
Comments