ಯೂ ಟರ್ನ್ ಹೊಡೆದ್ರಾ ಶಾಸಕ ಜಮೀರ್ ಅಹಮ್ಮದ್ ...!!
ಕಾಂಗ್ರೆಸ್ ಗೆ ಕೈ ಕೊಟ್ಟು ಜೆಡಿಎಸ್ ಗೆ ವಾಪಸ್ ಬರ್ತಾರಾ ಚೋಟಾ ಬ್ರದರ್. ಜೆಡಿಎಸ್ ಗೆ ವೋಟ್ ಹಾಕಿ ಅಂತ ಜಮೀರ್ ಹೇಳಿದ್ದೇಕೆ ? ಕುಮಾರಸ್ವಾಮಿ ಅವರನ್ನ ಜಮೀರ್ ಕೊಂಡಾಡಿದ್ದು ಏಕೆ? ಎಚ್ ಡಿಕೆ ಯನ್ನು ಸಿಎಂ ಮಾಡಿ ಅಂತ ಜಮೀರ್ ಪರಿಪರಿಯಾಗಿ ಬೇಡಿದ್ದೇಕೆ? ಬಿಗ್ ಬ್ರದರ್ ಮೇಲಿನ ಮುನಿಸು ಮರೆತರಾ ಜಮೀರ್ ? ಈ ಎಲ್ಲ ಪ್ರಶ್ನೆಗಳು ಹುಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಜಮೀರ್ ಅಹಮದ್ ವಿಡಿಯೋಯಿಂದಾಗಿ, ಅಷ್ಟಕ್ಕೂ ಈ ವಿಡಿಯೋದಲ್ಲಿ ಜಮೀರ್ ಹೇಳಿರೋದು ಹೀಗೆ.
1982 ರ ವರೆಗೂ ರಾಜ್ಯದಲ್ಲಿದ್ದ ಕಾಂಗ್ರೆಸ್ ನಮಗೇನು ಮಾಡಿಲ್ಲ. 1982 ರ ವರೆಗೆ ವೋಟ್ ತಗೊಂಡ್ರೆ ಹೊರತು ನಮಗೆ ಕಾರ್ಯಕ್ರಮ ಕೊಡ್ಲಿಲ್ಲ. 1983 ರಲ್ಲಿ ಬಂದ ಜನತಾ ದಳ ಸರಕಾರ ಮುಸ್ಲಿಮರ ಬಗ್ಗೆ ಆಲೋಚಿಸಿತು. ಮ್ಯಾನಿಫೆಸ್ಟೋದಲ್ಲಿ ಮುಸಲ್ಮಾನರಿಗೆ ಕಾರ್ಯಕ್ರಮಗಳನ್ನು ತಂದರು. 30 ವರ್ಷದ ಕಾಂಗ್ರೆಸ್ ಮ್ಯಾನಿಫೆಸ್ಟೋದಲ್ಲಿ ಮುಸ್ಲಿಮರ ಕಾರ್ಯಕ್ರಮ ಇರ್ಲಿಲ್ಲ. 1992 ರ ಬಾಬ್ರಿ ಮಸೀದಿ ಕೆಡವಲು ಕಾಂಗ್ರೆಸ್ ಸರ್ಕಾರ ಬೆಂಬಲ ಕೊಟ್ಟಿತ್ತು. ಆಗ ದೇಶದ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಮತ ಹಾಕಲು ನಿರ್ಧರಿಸಿದ್ರು. ರಾಜ್ಯದಲ್ಲಿ ಜಾತ್ಯತೀತ ಸಿದ್ದಾಂತ ಹೊಂದಿದ್ದ ದೇವೇಗೌಡರ ಪರ ಮುಸ್ಲಿಮರು ನಿಂತ್ರು.ದೇವೇಗೌಡ್ರು ಸಿಎಂ ಆದ 15 ದಿನದಲ್ಲೇ ಹುಬ್ಬಳಿ ಈದ್ಗಾ ಸಮಸ್ಯೆ ಪರಿಹಾರ ಮಾಡಿದ್ರು.40 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈದ್ಗಾ ಸಮಸ್ಯೆ ಪರಿಹಾರ ಮಾಡ್ಲಿಲ್ಲ. ದೇವೇಗೌಡರು ಮೊದಲ ಬಾರಿಗೆ ಮುಸ್ಲಿಮರಿಗೆ ಮೀಸಲಾತಿ ತಂದ್ರು. ಈದ್ಗಾ ಸಮಸ್ಯೆಯಿಂದ ಪ್ರತಿ ವರ್ಷ ಒಬ್ಬಿಬ್ಬರು ಮುಸ್ಲಿಮರು ಪ್ರಾಣ ಬಿಡ್ತಿದ್ದರು. ಗೌಡ್ರು ನಮಗೆ 22 ರೆಸಿಡೆನ್ಸ್ ಸ್ಕೂಲ್, ಮೆಡಿಕಲ್ ಕಾಲೇಜು ಕೊಟ್ಟರು. ಕಾಂಗ್ರೆಸ್ ನಮ್ಮ ಸಮಾಜಕ್ಕೆ ಎಂದು ಒಳ್ಳೇದು ಮಾಡ್ಲಿಲ್ಲ. ಕಾಂಗ್ರೆಸ್ ನೋಡಾಗಿದೆ ಒಂದು ಜೆಡಿಎಸ್ ಗೆ ವೋಟ್ ಕೊಟ್ಟು ಬಿಡಿ. ಕುಮಾರಸ್ವಾಮಿ ಬಗ್ಗೆ ನಾನು ಹತ್ತಿರದಿಂದ ನೋಡಿದ್ದೀನಿ, ಅವರಿಗೆ ಆರೋಗ್ಯ ಸರಿಯಿಲ್ಲದಿದ್ದರೂ, ಜನರ ಪರ ಇದ್ರು, ಬೆಳಗ್ಗೆ 6 ಗಂಟೆಯಿಂದ ಜನತಾದರ್ಶನ ಮಾಡ್ತಿದ್ರು. ಜಾತ್ಯಾತೀತ ದಳಕ್ಕೆ ಮುಸಲ್ಮಾನರು ಬೆಂಬಲ ನೀಡಬೇಕು.
ಜೆಡಿಎಸ್ ನಿಂದ ಸಿಡಿದ್ದೆದ್ದು ಬಂಡಾಯ ಶಾಸಕರಾಗಿ ಗುರುತಿಸಿಕೊಂಡಿರುವ ಜಮೀರ್ ಅಹಮ್ಮದ್, ಈಗ ಪ್ರತಿಯೊಬ್ಬರಲ್ಲೂ ಕಾಡುತ್ತಿರುವ ಪ್ರಶ್ನೆ ಏನೆಂದರೆ ಜಮೀರ್ ಅಹಮ್ಮದ್ ವಾಪಸ್ ಯೂ ಟರ್ನ್ ತೆಗೆದುಕೊಂಡ್ರ ಅಥವಾ ಇಷ್ಟ್ಟೆಲ್ಲಾ ಮಾತನಾಡುತ್ತಿದ್ದಾರೆ? ಯಾವಾಗ ಹೇಳಿರುವ ಮಾತುಗಳಿವು? ಕಾಂಗ್ರೆಸ್ ನ ಸರ್ಕಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಇತ್ತೀಚಿಗೆ ಹೊಗಳಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪರವಾಗಿ ಗುರ್ತಿಸಿಕೊಂಡಿರುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಬಹಳಷ್ಟು ಕ್ಯೂರಿಯಾಸಿಟಿ ಯನ್ನು ಹುಟ್ಟು ಹಾಕಿದೆ. ಜಮೀರ್ ಅಹಮ್ಮದ್ ಖಾನ್ ಯಾವಾಗ ಈ ವಿಡಿಯೋ ವನ್ನು ರೆಕಾರ್ಡ್ ಮಾಡಿದ್ರು ? ಜೆಡಿಎಸ್ ಪರವಾಗಿ ಮಾತನಾಡಿದ್ದಾರಲ್ಲಾ ಹಾಗಿದ್ರೆ ಏನಾದ್ರು ಯೂ ಟರ್ನ್ ನ ತೆಗೆದುಕೊಂಡ್ರಾ ? ಮತ್ತೆ ಕಾಂಗ್ರೆಸ್ ಗೆ ಕೈ ಕೊಟ್ಟು ಜೆಡಿಎಸ್ ಸೇರಿಕೊಳ್ಳುತ್ತಿದ್ದಾರಾ ಜಮೀರ್ ? ಈ ಸಂದರ್ಭದಲ್ಲಿ ಈ ವಿಡಿಯೋವನ್ನು ಯಾರು ಹಾಕಿದರು? ಇದು ಹಳೆ ವಿಡಿಯೋನ ಅಥವಾ ಈಗ ಮಾಡಿರುವ ವಿಡಿಯೋನ ಇದ್ಯಾವುದಕ್ಕೂ ಸರಿಯಾದ ಉತ್ತರವಿಲ್ಲ.
Comments