ಪ್ರಧಾನಿ ಮೋದಿ ಬಗ್ಗೆ ನಟ ಜಗ್ಗೇಶ್ ಮಾಡಿರುವ ಟ್ವಿಟ್ ವೈರಲ್
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ದಾಖಲಿಸಿದ್ದು, ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ನವರಸ ನಾಯಕ ಜಗ್ಗೇಶ್ ಪ್ರಧಾನಿ ಮೋದಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ನಂಬಿಕೆ ದೇವರು. ಜನ ಒಬ್ಬ ವ್ಯಕ್ತಿಯನ್ನು ನಂಬಬೇಕಾದರೆ ಅವನ ನಡೆ ನುಡಿ ಅಳೆದುತೂಗಿ ನಿರ್ಧರಿಸುತ್ತಾರೆ. ಆ ಮನುಷ್ಯ ಸರಿಕಂಡರೆ ಅವನನ್ನು ಹಿಂಬಾಲಿಸುತ್ತಾರೆ. ಅದರಲ್ಲೂ ನಂಬಿಕೆ ಇಮ್ಮಡಿಯಾದರೆ ಆರಾಧಿಸುತ್ತಾರೆ. ಅದರಲ್ಲೂ ಸಮರ್ಥ ಅನಿಸಿದರೆ ಅವನ ಪೂಜಿಸುತ್ತಾರೆ. ಭಾರತೀಯರು ಮೋದಿಯವರನ್ನು ಬರಿ ನಾಯಕನಾಗಿ ಕಂಡಿಲ್ಲ, ಹೆಮ್ಮೆಯ ಮಗ ಎಂಬಂತೆ ನಿರ್ಧರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕಾಯುತ್ತಿದ್ದಾರೆ ಕರುನಾಡ ಜನತೆ. ಅಭಿವೃದ್ಧಿ ಹರಿಕಾರನ ಸಿಂಹ ನಡೆ ಕರುನಾಡ ಕಡೆಗೆ. ಜೋಡಿ ಎತ್ತಾಗಲಿ ರಾಜ್ಯ ಕೇಂದ್ರ ರಾಜಕೀಯವಾಗಿ. ಆಗ ನೋಡಿ ಅಭಿವೃದ್ಧಿಯ ಪರ ಜಾತ್ರೆ.ಇಲ್ಲದಿದ್ದರೆ ಎತ್ತು ಏರಿಗೆ, ಕೋಣ ನೀರಿಗೆ ಹೋದ ಪರಿಸ್ಥಿತಿ. ಬದಲಾಗಲು ಕೈಗೆ ಕೈ ಎತ್ತಿ. ಹಿಡಿಯಿರಿ ಕಮಲ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
Comments