ಕರ್ನಾಟಕದಲ್ಲಿ ಬಿಜೆಪಿ ನಡೆಸಿರುವ ಕೆಟ್ಟ ಆಡಳಿತವನ್ನು ಜನತೆ ಮರೆತಿಲ್ಲ : ಎಚ್ ಡಿಕೆ

'ಗುಜರಾತ್, ಹಿಮಾಚಲಪ್ರದೇಶ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಬಂದರೂ, ನಮ್ಮ ರಾಜ್ಯದಲ್ಲಿ ಏನು ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಬೇರೆ ರಾಜ್ಯಕ್ಕೂ ನಮ್ಮ ರಾಜ್ಯಕ್ಕೂ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಅಲ್ಲಿನ ಫಲಿತಾಂಶ ಪರಿಣಾಮ ಬೀರಲಿದೆ ಎಂದು ಹೇಳಲು ಸಾಧ್ಯವಿಲ್ಲ' ಎಂದರು.
ನನ್ನ ಹುಟ್ಟುಹಬ್ಬದಂದು ಎಂದಿಗೂ ರಾಮನಗರಕ್ಕೆ ಬರುವುದನ್ನು ತಪ್ಪಿಸಿಲ್ಲ, ತಪ್ಪಿಸುವುದೂ ಇಲ್ಲ ಎಂದು ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ತಡ ರಾತ್ರಿ ನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವತೆಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಜನರ ಪ್ರೀತಿ ವಿಶೇಷ. ನಮ್ಮ ಕುಟುಂಬದ ಮಗ ಎಂದು ಭಾವಿಸಿ ನನ್ನ ಹುಟ್ಟುಹಬ್ಬವನ್ನು ಜನತೆ ಆಚರಿಸಿದ್ದಾರೆ, ಅದೇ ನನ್ನ ಆಸ್ತಿ ಎಂದು ಹೇಳಿದರು. ಈ ವರ್ಷದ ಹುಟ್ಟುಹಬ್ಬ ನನಗೆ ವಿಶೇಷವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಜನತಾದಳದ ಸರ್ಕಾರ ರಚಿಸಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಸಂಕಲ್ಪ ಹೊಂದಿದ್ದೇನೆ ಎಂದರು. ಕರ್ನಾಟಕದಲ್ಲಿ ಬಿಜೆಪಿ ನಡೆಸಿರುವ ಕೆಟ್ಟ ಆಡಳಿತದ ದಿನಗಳನ್ನು ಜನತೆ ಮರೆತಿಲ್ಲ. ಅದೇ ರೀತಿ ಕಾಂಗ್ರೆಸ್ ಆಡಳಿತವನ್ನೂ ಜನರು ಗಮನಿಸುತ್ತಿದ್ದಾರೆ. ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಬೇಡ, ಪ್ರಾದೇಶಿಕ ಪಕ್ಷ ಜನತಾದಳನ್ನ ಬೆಂಬಲಿಸಲು ಜನರು ತೀರ್ಮಾನಿಸಿದ್ದಾರೆ ಎಂದರು.
Comments