ಕುಮಾರಣ್ಣ ಮನಸ್ಸು ಮಾಡಿದ್ರೆ, ಈ ಬಾರಿ ಪೂಜಾರಿ ಕಣಕ್ಕಿಳಿಯುವುದು ಖಚಿತ

ಈ ಬಾರಿ ಎ. ಶಿವನಗೌಡ ನಾಯಕ್ ಹಣಿಯಲು ಕುಮಾರಣ್ಣ ಮನಸ್ಸು ಮಾಡಿದ್ರೆ, ಈ ಬಾರಿ ಜೆಡಿಎಸ್ನಿಂದ ಪೂಜಾರಿ ಕಣಕ್ಕಿಳಿಯುವುದು ಖಚಿತ. ಏಕೆಂದ್ರೆ ಹಾಲಿ ಶಾಸಕರಾದ ಶಿವಣ್ಣ 2008ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದು ಜಯಸಾಧಿಸಿದ್ದರು.
ಆ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಬಲಿಯಾಗಿ ಎನ್ನುವುದಕ್ಕಿಂತ ರಾಜಕೀಯ ಬೆಳವಣಿಗೆಗಾಗಿ ಜೆಡಿಎಸ್ಗೆ ಮೋಸ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಷ್ಟೇ ಅಲ್ಲಾ ಜೆಡಿಎಸ್ನಿಂದ ಆಯ್ಕೆಯಾದ 36ರೇ ದಿನದೊಳಗೆ ರಾಜಿನಾಮೆ ಕೊಟ್ಟು ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಮಾತುಗಳೂ ಸಹ ಕ್ಷೇತ್ರದಲ್ಲಿ ಹರಿದಾಡುತ್ತಿತ್ತು. ಇಷ್ಟೆಲ್ಲಾ ಮಾಡಿದ ಎ. ಶಿವನಗೌಡ ನಾಯಕ್ ಮೇಲೆ ಕುಮಾರಸ್ವಾಮಿಯವರು ಏನಾದರು ತಮ್ಮ ಕೋಪವನ್ನು ಈ ಚುನಾವಣೆಯಲ್ಲಿ ವೆಂಕಟೇಶ್ ಪೂಜಾರಿಗೆ ಟಿಕೆಟ್ ನೀಡಿ ಶಮನ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಸಹ ಇವೆ.
ಇದಿಷ್ಟು ಬಿಜೆಪಿ ಜೆಡಿಎಸ್ ವಕ್ಕಣೆ ಆದ್ರೆ, ಕಾಂಗ್ರೆಸ್ ಪಾಳಯದಲ್ಲಿ ಯಾವುದೇ ಅಸಮಾಧಾನವಿಲ್ಲದೆ, ರಾಜಶೇಖರ್ ನಾಯಕ್ ಟಿಕೆಟ್ ವಿಚಾರದಲ್ಲಿ ಆರಾಮವಾಗಿದ್ದಾರೆ ಎಂದೇ ಹೇಳಬೇಕು. ಹಾಗಂತ ಯಾವುದೇ ತೊಂದರೆ ಇಲ್ಲ ಎಂದೇನಿಲ್ಲ. ಈ ಕ್ಷೇತ್ರದಲ್ಲಿ ಸಂಸದ ಬಿ ವಿ ನಾಯಕ್ ಅಲೆ ಹೆಚ್ಚಾಗಿದ್ದು, ಕಾಂಗ್ರೆಸ್ ಈ ಕ್ಷೇತ್ರದಲ್ಲಿ ತಾವೇ ನಿಲ್ಲಬೇಕು ಎಂದು ದುಂಬಾಲು ಬಿದ್ದಿದೆಯಂತೆ. ಆದರೆ ಸಂಸದ ಬಿ ವಿ ನಾಯಕ್ ರಾಜಶೇಖರ್ ನಾಯಕ್ರ ಅಣ್ಣನಾಗಿದ್ದು, ಈ ಕ್ಷೇತ್ರದಲ್ಲಿ ತಮ್ಮ, ತಮ್ಮ ರಾಜಶೇಖರ್ ನಾಯಕ್ಗೆ ಟಿಕೆಟ್ ನೀಡುವಂತೆ ಮನವೊಲಿಸುವುದರ ಜೊತೆಗೆ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಶಪಥ ಮಾಡಿದ್ದಾರಂತೆ. ಒಟ್ಟಾರೆ ಈ ದೇವದುರ್ಗ ವಿಧಾನಸಭಾ ಕ್ಷೇತ್ರ ಕುಟುಂಬ ರಾಜಕಾರಣದ ಪಾರುಪತ್ಯ ಮೆರೆಯುತ್ತಿರುವುದರ ಜೊತೆಗೆ, ಯಾವ ಪಕ್ಷಗಳೂ ಕೂಡ ಕುಟುಂಬ ರಾಜಕಾರಣದ ಸದಸ್ಯರಿಗೆ ಬಿಟ್ಟು ಹೊಸ ಮುಖಗಳಿಗೆ ಟಿಕೆಟ್ ನೀಡದೇ ಇರುವುದು ಈ ಎಲ್ಲಾ ಕುಟುಂಬ ರಾಜಕಾರಣದ ಪಾರುಪತ್ಯಕ್ಕೆ ಕಾರಣವಾಗಿದೆ.
Comments