ಬಿಜೆಪಿ ಅವರ 'ಮನೆ ದೇವ್ರು' ಯಾರು ಗೊತ್ತಾ?
ಕಲಬುರಗಿ: ಬಿಜೆಪಿ ಅವರು ಎಲ್ಲಾ ಕಡೆಗಳಲ್ಲಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದ ಕನಸು ಕಾಣುತ್ತಿದ್ದಾರೆ.
ಗಾಳಿ ಗೋಪುರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅದೇನು ನಡೆಯೋದು ಎಂದು ಹೇಳಿದರು. ಬಿಜೆಪಿ ಅವರ ಮನೆ ದೇವ್ರು ಸುಳ್ಳು. ಏಕವಚನದಲ್ಲಿ ಬೈದ್ರೆ ನಾನು ಹೆದರಿಕೊಳ್ಳುತ್ತೇನೆ ಎಂದು ಬಿಎಸ್ ವೈ ಅಂದುಕೊಂಡಿದ್ದಾರೆ. ಯಡಿಯೂರಪ್ಪ ಅಂತಹವರು ನೂರು ಮಂದಿ ಬಂದರು ಹೆದರಿಸಲಾಗದು ಎಂದು ತಿಳಿಸಿದರು. ಅಧಿಕಾರದಲ್ಲಿ ಇದ್ದಾಗ ಜನರಿಗಾಗಿ ನಾವು ಏನು ಮಾಡಿಲ್ಲ. ಆದರೆ ಸುಳ್ಳು ಮತ್ತೊಂದು ಹೇಳಿ ಜನರನ್ನು ನಂಬಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಸಭೆಯೊಂದರಲ್ಲಿ ಹೇಳಿದ್ದಾರೆ.
Comments