'ಬಿಎಸ್ ವೈ, ಸಿಎಂ ಒಬ್ಬರನೊಬ್ಬರು ಛೇಡಿಸಿಕೊಂಡ ನಾಯಕರು

ಬೆಂಗಳೂರು: ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಒಬ್ಬ ನಾಯಕರು ಮತ್ತೊಬ್ಬ ನಾಯಕರ ಮೇಲೆ ಕಿಡಿ ಕಾರುವುದು ವಾಗ್ದಾಳಿ ನಡೆಸುವುದು ಈಗ ಕಾಮನ್.
ಬೆಂಗಳೂರು: ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಒಬ್ಬ ನಾಯಕರು ಮತ್ತೊಬ್ಬ ನಾಯಕರ ಮೇಲೆ ಕಿಡಿ ಕಾರುವುದು ವಾಗ್ದಾಳಿ ನಡೆಸುವುದು ಈಗ ಕಾಮನ್. ಅದರಂತೆ ಸಿಎಂ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸಿಕ್ಕಾಪಟ್ಟೆ ಬೈದುಕೊಂಡಿದ್ದಾರೆ. ಶನಿವಾರ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಪುಂಗಿ ಉದೋನು ಎಂದರೆ, ಯಡಿಯೂರಪ್ಪ ಸಿಎಂ ಅವರನ್ನು ಬೊಗಳೆ ದಾಸಯ್ಯ ಎಂದರು.
ಸಾಧನಾ ಸಮಾವೇಶದಲ್ಲಿ ರಾಯಚೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅನಂತಕುಮಾರ್ ಒಬ್ಬ ವಿದೂಷಕ. ಯಡಿಯೂರಪ್ಪ ಸಿಎಂ ಆಗಬಾರದು ಎಂದು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ ಎಂದರು. ಪರಿವರ್ತನಾ ಯಾತ್ರೆಯಲ್ಲಿ ಬಿಎಸ್ ವೈ ಒದೊಂದು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಬರೀ ಪುಂಗಿ ಊದುತ್ತಿದ್ದಾರೆ. ಅವರೊಬ್ಬ ಬೇಜವಾಬ್ದಾರಿ ಮನುಷ್ಯ ಎಂದರು.
Comments