ರಾಹುಲ್ ಗಾಂಧಿ ಯಿಂದ ಯುವಕರು ಪ್ರಭಾವಿತರಾಗಿದ್ದಾರೆ
ರಾಯಚೂರು: ಗುಜುರಾತ್ ನಲ್ಲಿ ಎಕ್ಸಿಟ್ ಪೋಲ್ ಏನೇ ಹೇಳಿದರೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ರಾಯಚೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಯಚೂರು: ಗುಜುರಾತ್ ನಲ್ಲಿ ಎಕ್ಸಿಟ್ ಪೋಲ್ ಏನೇ ಹೇಳಿದರೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ರಾಯಚೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಹುಲ್ ಗಾಂಧಿ ಮೇಲೆ ಯುವಕರು ಅಪಾರ ಭರವಸೆ ಇಟ್ಟಿದ್ದಾರೆ, ಕಾಂಗ್ರೆಸ್ ನಾಯಕರಲ್ಲಿ ರಾಹುಲ್ ಗಾಂಧಿ ಬಗ್ಗೆ ಯಾರು ಅಪಸ್ವರ ಎತ್ತಿಲ್ಲ.
ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಅವರಿಗೆ ದೊಡ್ಡ ಭವಿಷ್ಯವಿದೆ. ಇಡೀ ದೇಶದಲ್ಲಿ ಶಕ್ತಿಯುತವಾಗಿ ಪಕ್ಷ ಬೆಳೆಯುತ್ತೆ ಅನ್ನೋ ನಂಬಿಕೆ ಇದೆ ಎಂದರು. ಯಡಿಯೂರಪ್ಪನ ಹತ್ರ ಯಾವ ಇಟಲಿಜೆನ್ಸಿಯೂ ಇಲ್ಲ, 20 ಕ್ಷೇತ್ರಗಳಲ್ಲಿ ನಾನು ಎಲ್ಲಿಯೇ ಚುನಾವಣೆಗೆ ಸ್ಪರ್ಧಿಸಿದರೂ ಅಲ್ಲಿ ಗೆಲ್ಲುತ್ತೇನೆ. ವಿಧಾನಸಭೆಗೆ ಕೊನೆ ಚುನಾವಣೆ ಇದಾಗಿರುವುದರಿಂದ ಚಾಮುಂಡೇಶ್ವರಿಗೆ ಹೋಗುತ್ತಿದ್ದೇನೆ ಎಂದು ಸಿಎಂ ತಿಳಿಸಿದರು.
Comments