ತನ್ನನ್ನೇ 'ಫಿಟ್ ಹಿರೋಯಿನ್' ಎಂದ ಸಂಯುಕ್ತ

ಬೆಂಗಳೂರು: ಕನ್ನಡದ ಬಿಗ್ ಬಾಸ್ ನಲ್ಲಿರುವ ನಟಿ ಸಂಯುಕ್ತಾ ಹೆಗಡೆ ಕನ್ನಡ ಇಂಡಸ್ಟ್ರಿಯಲ್ಲೇ ತಾನೊಬ್ಬ ಫಿಟ್ನೆಸ್ ನಟಿ ಎಂದು ಸಂಯುಕ್ತಾ ಹೇಳಿಕೊಂಡಿದ್ದಾರೆ. ಇದೇ ರೀತಿಯ ಘಟನೆ 16ನೇ ದಿನ ಕೂಡ ನಡೆದಿದೆ.
ದಿವಾಕರ್ ನೀವು ಮೇಕಪ್ ಹಾಕಿದರೆ ಚೆನ್ನಾಗಿ ಕಾಣುತ್ತೀರಾ. ಮೇಕಪ್ ಇಲ್ಲದೆ ನಿಮ್ಮನ್ನು ನೋಡಿದರೆ ಹಿರೋಯಿನ್ ಅಂತ ಅನಿಸುವುದೇ ಇಲ್ಲ ಎಂದಾಗ ಅದು ಸಂಯುಕ್ತಾಳ ಈಗೋಗೆ ಸ್ವಲ್ಪ ನೋವಾಗಿದೆ. ಅದು ತೋರ್ಪಡಿಸದೇ ಸಮಾಜಾಯಿಷಿ ನೀಡುವ ಭರದಲ್ಲಿ ನನ್ನಷ್ಟು ಫಿಟ್ ಹಿರೋಯಿನ್ ಕನ್ನಡ ಇಂಡಸ್ಟ್ರಿಯಲ್ಲಿ ಇಲ್ಲ ಎಂದಿದ್ದಾರೆ.
ಹೀಗೆ ತಮ್ಮ ನೇರ ಮಾತುಗಳಿಂದ ಮತ್ತೊಬ್ಬರ ಮನ ನೋಯಿಸುವ ಸಂಯುಕ್ತಾ ಹೆಗಡೆ ತನ್ನ ಆಪ್ತ ಗೆಳತಿ ಲಾಸ್ಯಾ ಒಂದು ಚಿಕ್ಕ ಅಭಿಪ್ರಾಯ ಹೇಳಿದರೆ ಅದನ್ನು ಅರಗಿಸಿಕೊಳ್ಳುವುದಿಲ್ಲ.
Comments