ಸೋನಿಯಾ ಗಾಂಧಿ ಭಾಷಣಕ್ಕೆ ಅಡ್ಡಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಕೊನೆಯ ಭಾಷಣ ಮಾಡಲು ಮುಂದಾದಾಗ ಅಡ್ಡಿಯಾದ ಘಟನೆ ವರದಿಯಾಗಿದೆ. ರಾಹುಲ್ ಗಾಂಧಿ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಕೆಲ ಕಾಲ ಸೋನಿಯಾ ಗಾಂಧಿ ಭಾಷಣ ಬಿಟ್ಟು ಸುಮ್ಮನೆ ನಿಂತ ಘಟನೆ ವರದಿಯಾಗಿದೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಕೊನೆಯ ಭಾಷಣ ಮಾಡಲು ಮುಂದಾದಾಗ ಅಡ್ಡಿಯಾದ ಘಟನೆ ವರದಿಯಾಗಿದೆ. ರಾಹುಲ್ ಗಾಂಧಿ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಕೆಲ ಕಾಲ ಸೋನಿಯಾ ಗಾಂಧಿ ಭಾಷಣ ಬಿಟ್ಟು ಸುಮ್ಮನೆ ನಿಂತ ಘಟನೆ ವರದಿಯಾಗಿದೆ. ಸೋನಿಯಾ ಗಾಂಧಿ ಅಂತಿಮ ಭಾಷಣ ನಡೆಸಲು ಮುಂದಾದಾಗ ಪಟಾಕಿಯಿಂದಲೇ ಭಾಷಣವನ್ನು ಕೆಲ ಕಾಲ ಸ್ಥಗಿತಗೊಳಿಸಿದ್ದಾರೆ.
ರಾಹುಲ್ ಗೆ ರಾಷ್ಟ್ರಾಧ್ಯಕ್ಷ ಪಟ್ಟ ನೀಡಿದ ಬಳಿಕ ಅಂತಿಮ ಭಾಷಣ ಮಾಡಲು ಸೋನಿಯಾ ಮುಂದಾದಾಗ ಭಾವೋದ್ವೇಗಕ್ಕೊಳಗಾದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ. ಇದರಿಂದ ವೇದಿಕೆ ಸುತ್ತ ಭಾರೀ ಸದ್ದು ಕೇಳಿಸಿತ್ತು.
ಭಾಷಣದ ವೇಳೆ ಸೋನಿಯಾ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಮೆಲಕು ಹಾಕಿದ್ದಾರೆ, ನಮ್ಮ ಪಕ್ಷದ ಪ್ರಭಾವ ಕ್ಷೀಣಿಸುತ್ತಿದೆ ಎಂದು ಮನಗಂಡು ನಾನು ಅಧಿಕಾರದ ಚುಕ್ಕಾಣಿ ಹಿಡಿದೆ. ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿಯವರ ತ್ಯಾಗಗಳನ್ನು ಗೌರವಿಸುವ ಉದ್ದೇಶದಿಂದ ರಾಜಕೀಯಕ್ಕೆ ಬಂದೆ ಹಾಗೂ ಇದೇ ವೇಳೆ ಅತ್ತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಹಾಗೂ ರಾಜೀವ್ ಗಾಂಧಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಇಂದಿರಾ ಗಾಂಧಿ ತಮ್ಮನ್ನು ಮಗಳಂತೆ ನೋಡಿಕೊಂಡಿದ್ದರು ಎಂದು ಭಾವುಕರಾಗಿ ನುಡಿದಿದ್ದಾರೆ.
Comments