59ನೇ ವಸಂತಕ್ಕೆ ಕಾಲಿಟ್ಟಿರುವ ಮಗನಿಗೆ ಶುಭ ಹಾರೈಸಿದ ಎಚ್.ಡಿ.ದೇವೇಗೌಡ್ರು
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ತಮ್ಮ 59ನೇ ಹುಟ್ಟುಹಬ್ಬ ಆಚರಿಸಿಕೊಂಡರು.59ನೇ ವಸಂತಕ್ಕೆ ಕಾಲಿಟ್ಟಿರುವ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇಕ್ ತಿನ್ನಿಸುವ ಮೂಲಕ ಶುಭಕೋರಿದರು. ಸ್ವಗೃಹದಲ್ಲಿ ಜೆಡಿಎಸ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ ಕುಮಾರಸ್ವಾಮಿ ಅವರು ಹುಟ್ಟುಹಬ್ಬ ಸಂಭ್ರಮಕ್ಕೆ ಶುಭಾಷಯ ಕೋರಿದ ಮುಖಂಡರಿಗೆ ಧನ್ಯವಾದ ಅರ್ಪಿಸಿದರು.
ಜೆಡಿಎಸ್ ಮುಖಂಡರಾದ ಪಿಜಿಆರ್ ಸಿಂಧ್ಯಾ, ಎಚ್.ವಿಶ್ವನಾಥ್, ಎಚ್.ಡಿ.ರೇವಣ್ಣ , ಟಿ.ಎ.ಶರವಣ ಸೇರಿ ಪಕ್ಷದ ಹಲವು ಪ್ರಮುಖರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮಗೆ ಅವರಿಗೆ ಶುಭ ಕೋರಲು ಆಗಮಿಸಿದ್ದ ಮಕ್ಕಳಿಗೆ ಕೇಕ್ ತಿನ್ನಿಸಿ ಕುಮರಸ್ವಾಮಿ ಖುಷಿಪಟ್ಟರು. ಬೆಳಿಗ್ಗೆಯಿಂದಲೇ ಮನೆಯ ಬಳಿ ನೆರೆದಿದ್ದ ಕುಮಾರಸ್ವಾಮಿ ಅಭಿಮಾನಿಗಳೊಂದಿಗೆ ಬೆರೆತ ಕುಮಾರಸ್ವಾಮಿ ಅವರು ಎಲ್ಲರೂ ತಮಗಾಗಿ ತಂದಿದ್ದ ಕೇಕ್ ಕತ್ತರಿಸಿ ಖುಷಿ ಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕನಿಷ್ಟ 15 ಕ್ಷೇತ್ರಗಳಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಿಕೊಳ್ಳಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆಂದು ಅಪ್ಪಾಜಿ ಹೋಟೆಲ್ ನಲ್ಲಿ ವಿಶೇಷ ಅಡುಗೆಯನ್ನು ಸಿದ್ದಪಡಿಸಲಾಗಿದೆ.
Comments