ಸಂಸ್ಕೃತಿ, ಸಂಸ್ಕಾರ, ಸಂಸದೀಯ ಭಾಷೆ ಗೊತ್ತಿಲ್ಲದ ಪಕ್ಷ ಇದು, ಸಿಎಂ

ಬೆಂಗಳೂರು: ಈ ಪಕ್ಷಕ್ಕೆ ಸಂಸ್ಕೃತಿ, ಸಂಸ್ಕಾರ, ಸಂಸದೀಯ ಭಾಷೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸಂಸ್ಕೃತಿ, ಸಂಸದೀಯ ಭಾಷೆ, ಸಂಸ್ಕಾರ ಗೊತ್ತಿಲ್ಲದ ಬಿಜೆಪಿ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ,
ಕೊಪ್ಪಳ ಜಿಲ್ಲಾ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಅವರು, ಬಿಜೆಪಿ ಸೋಲಿನ ಹತಾಶೆಯಿಂದ ಮನೋಭಾವದಿಂದ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಗಂಗಾವತಿ, ಸಮಾವೇಶ ಗಂಗಾವತಿ ಹಾಗೂ ಕನಕಗಿರಿಯಲ್ಲಿ ಸುಮಾರು 607 ಕೋಟಿ ರೂ ಮೊತ್ತದ ನಾನಾ ಕಾಮಗಾರಿ ಉದ್ಘಾಟನೆ ಮಾಡಿದ ಅವರು, ಬಿಜೆಪಿಯ ಮಿಷನ್ 150 ಈಗ 50 ಕ್ಕೆ ಇಳಿದಿದೆ. ಜೆಡಿಎಸ್ 25ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.
ಯಡಿಯೂರಪ್ಪ ತಾಕತ್ತು ಇದ್ದರೆ ಒಂದೇ ವೇದಿಕೆ ಮೇಲೆ ಬರಲಿ, ಅವರೊಬ್ಬ ಡೋಂಗಿ ನಾಯಕ. ಬರೀ ಸುಳ್ಳು ಹೇಳುವುದೇ ಆತನ ಕೆಲಸ , ಸಾವಿರ ಸುಳ್ಳು ಹೇಳಿ ಸತ್ಯ ಎಂದು ನಂಬಿಸುವಂತೆ ಬಿಜೆಪಿಯವರೇ ಮೇಲಿಂದ ಮೇಲೆ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪಾ ಜೈಲು ಸೇರಿದ್ದು ಇತಿಹಾಸ ಸೇರಿದೆ. ಸಿಎಂ ಸೇರಿದಂತೆ ಸಚಿವರು ಜೈಲಿಗೆ ಹೋಗಿದ್ದು, ಬೀಗತನ ಮಾಡುವುದಕ್ಕಾ ? ಎಂದು ಪ್ರಶ್ನಿಸಿದರು.
Comments