ಇಂದಿರಾ ಗಾಂಧಿ ಜೈಲಿಗೆ ಹೋಗಿ ಬಂದಿರುವುದು ಸಿಎಂಗೆ ನೆನಪಿಲ್ಲವೆ : ಬಿಎಸ್ ವೈ
‘ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಕಡೆಗಳಲ್ಲಿ ಮರ್ಯಾದೆ ಬಿಟ್ಟು ಹೇಳುವುದನ್ನು ಕೇಳಿದ್ದೇನೆ. ಆದರೆ, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಸಹ ಒಂದು ತಿಂಗಳು ಜೈಲಿಗೆ ಹೋಗಿ ಬಂದಿರುವುದು ಸಿದ್ದರಾಮಯ್ಯ ಅವರಿಗೆ ನೆನಪಿಲ್ಲವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು?
‘ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರು ಜಾಮೀನಿನ ಮೇಲೆ ಓಡಾಡುತ್ತಿರುವುದು, ವಕೀಲರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೆ? ಯಾವುದೇ ಅಪರಾಧ ಮಾಡದೆ ಯಡಿಯೂರಪ್ಪ ಅವರನ್ನು 20 ದಿನ ಜೈಲಿಗೆ ಕಳುಹಿಸಿದ್ದು ಅಕ್ಷಮ್ಯ ಅಪರಾಧ ಎಂದು ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಆದೇಶ ಮಾಡಿದ ಮೇಲೆಯೂ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
Comments