ಸಿಎಂ ಯಡವಟ್ಟು !
ಕೊಪ್ಪಳ: ಕಾಂಗ್ರೆಸ್ ಸಮಾವೇಶದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಭಾಷಣದ ವೇಳೆ ಸಿಎಂ ರಾಜೀವ್ ಗಾಂಧಿ ಎನ್ನಬೇಕಾದರೆ ರಾಹುಲ್ ಗಾಂಧಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿರುವುದು ಗೊತ್ತಾಗಿದೆ.
ಮಾಧ್ಯಮದವರು ರಾಹುಲ್ ಗಾಂಧಿ ಅಲ್ಲ, ರಾಜೀವ್ ಗಾಂಧಿ ಅಂದಾಗ ಅದೇ ನಾನು ರಾಜೀವ್ ಗಾಂಧಿ ಅಂದಿದ್ದು, ನೀವೆ ಮಧ್ಯೆ ಮಾತಾಡಿ ಎಡವಟ್ಟು ಮಾಡಿದ್ರಿ ಎಂದು ಹೇಳಿದರು.
ರಾಹುಲ್ ಗಾಂಧಿ ಹತ್ಯೆ ನಡೆಯುವ ಮುನ್ನ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದರೆ, ನಾನು ಗೆಲ್ಲುತ್ತಿದ್ದೆ, ಸಿಎಂ ಆಗುತ್ತಿರಲಿಲ್ಲ, ಇದು ಎಡವಟ್ಟಿನ ಪ್ರಮುಖ ಮಾತಾಗಿತ್ತು. ಇನ್ನು ಕಾಂಗ್ರೆಸ್ ಸಮಾವೇಶದ ವೇಳೆ ಹಲವರು ಕಲ್ಲು ತೂರಾಟ ನಡೆಸಿದ ಪ್ರಸಂಗ ಕೂಡ ನಡೆದಿದೆ. ಕೆಲವರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕುರ್ಚಿಗಳನ್ನು ಎಸೆದು ಜಗಳವಾಡಿಕೊಂಡಿದ್ದಾರೆ.
Comments