ನಾವು ಓದುವ ಸಮಯದಲ್ಲಿ ಲೈಬ್ರರಿಗೆ ಬಹಳ ಮಹತ್ವವಿತ್ತು- ಸಚಿವೆ ಗೀತಾ ಮಹದೇವಪ್ರಸಾದ್

ಬೆಂಗಳೂರು: ನಾವು ಓದುವ ಸಮಯದಲ್ಲಿ ಲೈಬ್ರರಿಗೆ ಬಹಳ ಮಹತ್ವವಿತ್ತು. ಗ್ರಂಥಾಲಯ ಮತ್ತು ಆಟದ ಮೈದಾನ ಹೆಚ್ಚು ಕಾಲಕಳೆಯ ಬೇಕಾದ ಸ್ಥಳಗಳಾಗಿದ್ದವು ಎಂದರು.
ಬೆಂಗಳೂರು: ನಾವು ಓದುವ ಸಮಯದಲ್ಲಿ ಲೈಬ್ರರಿಗೆ ಬಹಳ ಮಹತ್ವವಿತ್ತು. ಗ್ರಂಥಾಲಯ ಮತ್ತು ಆಟದ ಮೈದಾನ ಹೆಚ್ಚು ಕಾಲಕಳೆಯ ಬೇಕಾದ ಸ್ಥಳಗಳಾಗಿದ್ದವು ಎಂದರು.
ಮಕ್ಕಳು ನಿಮಗಿಷ್ಟವಾದ ಪುಸ್ತಕವನ್ನು ಗ್ರಂಥಾಲಯದಲ್ಲಿ ಕುಳಿತು ಓದಬೇಕು. ವಿಜ್ಞಾನ , ಕಥೆ ಪುಸ್ತಕಗಳು , ಡಿಸ್ಕವರಿ ಸ್ವಾತಂತ್ರ್ಯ ಹೋರಾಟಗಾರರು ರಾಜಕಾರಿಣಿಗಳು ಹೀಗೆ ಯಾವುದಾದರೂ ಪುಸ್ತಕ ಓದಬೇಕು ಅವರು ಯಾವ ರೀತಿ ಹೋರಾಟ ನಡೆಸಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಲಿಸು ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ತೆರೆಯುತ್ತಿರುವ ಲೈಬ್ರರಿ ಇದು 14ನೆಯದಾಗಿದ್ದು, ಅವರ ಕಾರ್ಯ ಶ್ಲಾಘನೀಯ ಮಕ್ಕಳಿಗೆ ಅನುಕುಲವಾಗುವ 1ರಿಂದ 7ನೇ ತರಗತಿಯವರೆಗಿನವರಿಗೆ ಬೇಕಾಗುವ ಪುಸ್ತಕಗಳನ್ನು ಇರಿಸಲಾಗಿದೆ. ಮಕ್ಕಳು ಇಲ್ಲಿ ಇಲ್ಲದ ತಮ್ಮ ಸ್ನೇಹಿತರ ಮನೆಗಳಲ್ಲಿ ನೋಡಿದ ಆಸಕ್ತಿದಾಯಕ ಪುಸ್ತಕಗಳಿದ್ದರೆ ತಮ್ಮ ಶಿಕ್ಷಕರಲ್ಲಿ ತಿಳಿಸಿದರೆ ಅವರು ಅದನ್ನು ಇಲ್ಲಿ ತಂದಿರಿಸುತ್ತಾರೆ ಎಂದರು.
Comments