ನಾಳೆ ರಾಜ್ಯದೆಲ್ಲೆಡೆ ವಿಎಚ್ ಪಿ ಪ್ರತಿಭಟನೆ

ಉಡುಪಿ: ಹೊನ್ನಾವರದಲ್ಲಿ ಪರೇಶ್ ಮೇಸ್ತ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ಆಗ್ರಹಿಸಿ ಹಾಗೂ ಹೊನ್ನಾವರದ ಗುಡ್ ಲಕ್ ಹೊಟೇಲ್ ಓನರ್ ಆಜಾದ್ ಅಣ್ಣಿಗೆರೆಯನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದರು.
ಉಡುಪಿ: ಹೊನ್ನಾವರದಲ್ಲಿ ಪರೇಶ್ ಮೇಸ್ತ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ಆಗ್ರಹಿಸಿ ಹಾಗೂ ಹೊನ್ನಾವರದ ಗುಡ್ ಲಕ್ ಹೊಟೇಲ್ ಓನರ್ ಆಜಾದ್ ಅಣ್ಣಿಗೆರೆಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಬುಧುವಾರ ಮತ್ತು ಗುರುವಾರ ರಾಜ್ಯಾದ್ಯಂತ ವಿಶ್ವಹಿಂದೂ ಪರಿಷತ್ ಪ್ರತಿಭಟನೆ ನಡೆಸಲಿದೆ ಎಂದು ವಿಎಚ್ ಪಿ ಮುಖಂಡ ವಿ.ಗೋಪಾಲ್ ತಿಳಿಸಿದ್ದಾರೆ.
ಹೊನ್ನಾವರದಲ್ಲಿ ಪರೇಶ್ ಮೇಸ್ತನ್ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ನಿಷ್ಪಕ್ಷಪಾತವಾಗಿ ಮಾಡುವ ಭರವಸೆ ಇಲ್ಲ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂಬ ಒತ್ತಾಯದೊಂದಿಗೆ ಪ್ರತಿಭಟನೆ ನಡೆಸಲು
ನಿರ್ಧರಿಸಿದ್ದೇವೆ ಎಂದರು.
Comments