ಚಕ್ರವರ್ತಿ ಸೂಲಿಬೆಲೆ ಮಾತುಗಳಿಗೆ ಕುಮಾರಣ್ಣನ ಅಭಿಮಾನಿಗಳಿಂದ ಮಚ್ಚುಗೆ
ಚಕ್ರವರ್ತಿ ಸೂಲಿಬೆಲೆ ಲೈವ್ ಬಂದ ವಿಡಿಯೋದಲ್ಲಿ ಪರೋಕ್ಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದು , ಹಿಂದೂ – ಮುಸ್ಲಿಂರನ್ನು ಒಡೆದು ಮತಗಳನ್ನು ತಿರುಗಿಸಿಕೊಳ್ಳುವುದು ಬೇಡ ,ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಹಿಡಿದು ಮತ ಕೇಳುವುದು ಬೇಡ, ತಾಕತ್ತಿದ್ದರೆ ವಿಕಾಸದ ಹೆಸರಿನಲ್ಲಿ ,ನೀವು ಮಾಡಿರುವ ಅಭಿವೃದ್ಧಿ ಕೆಲಸಗಳು ,ರಾಜ್ಯದ ಅಭಿವೃದ್ಧಿಗೆ ನೀವೇ ಹಾಕಿಕೊಂಡಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಎದುರಿಸಿ ಅಂತ ನೇರ ಸವಾಲ್ ಹಾಕಿದ್ದಾರೆ.
ಸೂಲಿಬೆಲೆ ಲೈವ್ ಬಂದ ವಿಡಿಯೋದಲ್ಲಿನ ಪ್ರಮುಖ ಭಾಗವನ್ನು ನೆಟ್ಟಿಗರು ತುಂಡರಿಸಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಕುಮಾರಸ್ವಾಮಿಯವರ ಬಹುತೇಕ ಬೆಂಬಲಿಗರು ಇವರ ವಿಕಾಸದ ಮಾತುಗಳಿಗೆ ಮನಸೋತು ಶಭಾಷಗಿರಿ ಕೊಡುತ್ತಿದ್ದಾರೆ. ಕುಮಾರಸ್ವಾಮಿಯವರು ಮತ್ತು ದೇವೇಗೌಡರ ಆಡಳಿತದ ಅವಧಿಯಲ್ಲಿ ಯಾವುದೇ ಜಾತಿ ಧರ್ಮಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳದೆ, ಅವರು ಅನೇಕ ಅಭಿವೃದ್ಧಿ ಕೆಲಸಗಳು ಮಾಡಿರುವುದರಿಂದ ಸೂಲಿಬೆಲೆ ವಿಕಾಸ ಮುಂದಿಟ್ಟುಕೊಂಡು ಮಾತಾಡಿ ಅಂದಿದ್ದು ಜೆಡಿಎಸ್ ಬೆಂಬಲಿಗರ ಮೆಚ್ಚುಗೆಗೆ ಪ್ರಮುಖ ಕಾರಣವಾಗಿದೆ. ಜೆಡಿಎಸ್ ಬೆಂಬಲಿಗರು ತಮ್ಮೆಲ್ಲ ಫೇಸ್ಬುಕ್ ಪುಟಗಳಲ್ಲಿ, ಖಾತೆಗಳಲ್ಲಿ ,ಗುಂಪುಗಳಲ್ಲಿ ಹಾಕಿಕೊಂಡು , ವಾಟ್ಸ್ಅಪ್ ನಲ್ಲಿ ಸ್ಟೇಟಸ್ ಸಹ ಇಟ್ಟುಕೊಂಡು ಸಂಭ್ರಮಿಸುತ್ತಿದ್ದಾರೆ , ಈ ವಿಡಿಯೋವನ್ನು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ.
Comments