ನನಗೆ ಉಪೇಂದ್ರ ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ: ಹಿರೇಮಠ
'ರೈತರ ಜಮೀನಿನಲ್ಲಿ ನಟ ಉಪೇಂದ್ರ ರೆಸಾರ್ಟ್ ಕಟ್ಟಿರುವುದು ಸರಿಯಲ್ಲ, ರಾಜಕೀಯ ವ್ಯವಸ್ಥೆಯನ್ನು ಬದಲಾವಣೆ ಮಾಡುತ್ತೇನೆ ಎಂದು ಹೊರಟಿರುವ ನಟ ಉಪೇಂದ್ರ ಅವರು, ಮೊದಲು ರೈತರ ಜಮೀನನ್ನು ಹಿಂತಿರುಗಿಸಿ ಬದಲಾವಣೆ ತಮ್ಮಿಂದಲೇ ಆಗಲು ನಾಂದಿ ಹಾಡಬೇಕು' ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಕೋರ್ಟಿನಲ್ಲಿ ತೀರ್ಪು ಆಗುವ ಮುನ್ನವೇ ಉಪೇಂದ್ರ ಅವರು ರೈತರಿಗೆ ಜಮೀನು ವಾಪಸ್ ಕೊಟ್ಟು ಸುಧಾರಣೆ ತನ್ನಿಂದಲೇ ಆಗಲಿ ಅನ್ನೋದನ್ನು ತೋರಿಸಿಕೊಡಬೇಕಿದೆ. ಇನ್ನು ನನಗೆ ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ, ಅಲ್ಲದೆ ಅವರ ಮುಂದಿನ ರಾಜಕೀಯ ಜೀವನವನ್ನು ಅವರು ಸುಧಾರಿಸಿಕೊಳ್ಳಲಿ ಎಂದು ನಾನು ಸಲಹೆ ನೀಡಿದ್ದೆ ಎಂದರು.
Comments