ಅಭಿಮಾನಿಗಳ ಮನೆಗೆ ಬರಲಿದ್ದಾರೆ ಡಾ. ವಿಷ್ಣುವರ್ಧನ್

ಹೌದು. ಅದು ಕ್ಯಾಲೆಂಡರ್ ಮೂಲಕ. ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷಕ್ಕೆ ವಿಷ್ಣುವರ್ಧನ್ ಕ್ಯಾಲೆಂಡರ್ ಮೂಲಕ ಅಭಿಮಾನಿಗಳ ಮನೆ - ಮನೆ ತಲುಪಲಿದ್ದಾರೆ. ಇಂಥದ್ದೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘ. ಈಗಾಗಲೇ ಡಾ. ವಿಷ್ಣುವರ್ಧನ್ ರ 'ಕೋಟಿಗೊಬ್ಬ' ಕ್ಯಾಲೆಂಡರ್ ಲೋಕಾರ್ಪಣೆಗೊಂಡಿದೆ.
ಈ ತರಹದ ಪ್ರಯೋಗ ಇದೇ ಮೊದಲು ನಡೆದಿದೆ. ವೀರಕಪುತ್ರ ಶ್ರೀನಿವಾಸ್ ರ ನೇತೃತ್ವದಲ್ಲಿ ಈ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ. ಕನ್ನಡದ ಅಪ್ರತಿಮ ಕಲಾವಿದ ವಿಷ್ಣುವರ್ಧನ್, ಅಭಿಮಾನಿಯ ಮನೆ-ಮನಗಳಿಗೂ ತಲುಪಿಸಬೇಕೆಂಬ ಸದುದ್ದೇಶದಿಂದ ಕಳೆದ ಆರು ವರ್ಷಗಳಿಂದ ಡಾ.ವಿಷ್ಣು ಸೇನಾ ಸಮಿತಿ ಈ ಕ್ಯಾಲೆಂಡರ್ ಹೊರತರುತ್ತಿದೆ. 14 ಪುಟಗಳ ಕ್ಯಾಲೆಂಡರ್ ನಲ್ಲಿ ಡಾ.ವಿಷ್ಣುವರ್ಧನ್ ರ ಅಪರೂಪದ ಚಿತ್ರಗಳು, ಅವರ ಸಂದರ್ಶನದ ಆಯ್ದ ನುಡಿಗಳು, ಡಾ.ವಿಷ್ಣು ರಾಷ್ಟ್ರೀಯ ಉತ್ಸವದ ವಿವರಣೆ ಈ 'ಕೋಟಿಗೊಬ್ಬ' ಕ್ಯಾಲೆಂಡರ್ ನಲ್ಲಿದೆ.
Comments