ಚನ್ನಪಟ್ಟಣ ನನ್ನ ಎರಡನೇಯ ಮನೆ ಎಂದ ದೇವೇಗೌಡ್ರು

ಚನ್ನಪಟ್ಟಣ ನನ್ನ ಎರಡನೇಯ ಮನೆ. ಹಾಸನದಲ್ಲಿ ಸೋತಾಗ ಜನ ರಾಮನಗರ ಜಿಲ್ಲೆಯಿಂದ ನನ್ನನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದರು ಎಂದು ದೇವೇಗೌಡರು ಹೇಳಿದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಆದರೆ, ಪಕ್ಷದ ಮುಖಂಡರಲ್ಲಿ ಐಕ್ಯತೆ ಕಡಿಮೆಯಾಗಿದೆ.
ಭೈರವೇಶ್ವರನ ಸನ್ನಿಧಿಯಲ್ಲಿ ಅವರಿಗೆಲ್ಲ ಒಗ್ಗಟ್ಟಾಗಿರಲು ಪ್ರಾರ್ಥನೆ ಮಾಡಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ನಮ್ಮದು ಒಂದು ಕಾಣಿಕೆ ಎಂದು ಮುಖಂಡರು ಕೆಲಸ ಮಾಡಬೇಕು ಎಂದರು.
ಮುಖಂಡರು ಒಗ್ಗಟ್ಟಾಗಿದ್ದರೆ ಯಾರು ಎಷ್ಟು ಕೋಟಿ ಖರ್ಚು ಮಾಡಿದರೂ ಚನ್ನಪಟ್ಟಣದಲ್ಲಿ ನಾವು ಗೆಲ್ಲುತ್ತೇವೆ. ಪಕ್ಷದ ಮುಖಂಡರಿಗೆ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಲು ಹೇಳಿದ್ದೇನೆ. ನಂತರ ಚನ್ನಪಟ್ಟಣದ ಇಗ್ಗಲೂರು ಬಳಿ ನಾನು ಸಭೆ ಮಾಡುತ್ತೇನೆ ಎಂದರು.
Comments