ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 'ರಾಹುಲ್ ಗಾಂಧಿ 'ಅಧಿಕೃತ ಘೋಷಣೆ

ನವದೆಹಲಿ :ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇದೇ 16ರಂದು ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ನವದೆಹಲಿ :ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇದೇ 16ರಂದು ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಆಳಿದ್ದ ಸೋನಿಯಾಗಾಂಧಿ ಅವರ ಯುಗಾಂತ್ಯ ಸನಿಹವಾಗಿದ್ದು, ರಾಹುಲ್ ಗಾಂಧಿ ಪಕ್ಷದ ನೂತನ ಸಾರಥಿ ಆಗಲಿದ್ದಾರೆ.
ಇದೇ 11ರಂದು ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲು ನಾಳೆಯೇ ಅಂತಿಮ ದಿನವಾಗಿದ್ದು, ರಾಹುಲ್ ಗಾಂಧಿ ಹೊರತು ಪಡಿಸಿದರೆ ಬೇರಾವುದೇ ನಾಯಕರು ನಾಮಪತ್ರ ಸಲ್ಲಿಸಿಲ್ಲ.
Comments