ಸೊಸೆಗೆ ಟಿಕೆಟ್ ನೀಡುವ ಬಗ್ಗೆ ತೆರೆ ಎಳೆದ ದೇವೇಗೌಡ್ರು

ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕಾರಣದ ಅಪವಾದ ಸುತ್ತಿಕೊಂಡಿದೆ, ಈ ಹಿನ್ನಲೆಯಲ್ಲಿ ಅನಿತಾ ಕುಮಾರಸ್ವಾಮಿಗೆ ಟಿಕೆಟ್ ನೀಡಿ ಎಂದು ಒತ್ತಡ ತರುವುದು ಸೂಕ್ತ ಅಲ್ಲ, ಈಗಾಗಲೇ ಅನಿತಾ ಕುಮಾರಸ್ವಾಮಿ ಎರಡು ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತಿದ್ದಾರೆ. ಅವರನ್ನು ಅಭ್ಯರ್ಥಿ ಎಂದು ಘೋಸಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಜಿಲ್ಲೆಯ ಚನ್ನಪಟ್ಟಣದ ನೀಲಸಂದ್ರದ ಬೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಅನಿತಾ ಅವರು ಚನ್ನಪಟ್ಟಣ ಕ್ಷೇತ್ರದ ಒಡನಾಟ ಹೊಂದಿದ್ದಾರೆ, ಅವರು ಕೂಡ ಆಕಾಂಕ್ಷಿ, ಅವರನ್ನು ಹಳ್ಳಿಗೂ ಕರೆದುಕೊಂಡು ಹೋಗಿ, ಮತದಾರರ ವಿಶ್ವಾಸಗಳಿಸಿಕೊಂಡ ನಂತರ ನೋಡೋಣ ಎಂದು ಹೇಳುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಗುವ ಮುನ್ಸೂಚನೆಯನ್ನು ನೀಡಿದರು.
ಸಭೆ ಆರಂಭವಾಗುತ್ತಿದ್ದಂತೆ ಸ್ಥಳೀಯ ಮುಖಂಡರಿಂದ ಅನಿತಾ ಕುಮಾರಸ್ವಾಮಿರನ್ನ ಕಣಕ್ಕಿಳಿಸಲು ವೇದಿಕೆಯಲ್ಲಿಯೇ ದೇವೇಗೌಡರನ್ನ ಒತ್ತಾಯಿಸಿದ ಮುಖಂಡರಿಗೆನೀತಿಪಾಠ ಜೆಡಿಎಸ್ ಅಧ್ಯಕ್ಷ ಎಚ್.ಡಿ ದೇವೇಗೌಡ ಹೇಳಿದರು.ಇದೀಗ ಒಂದು ಕ್ಷೇತ್ರದ ಅಭ್ಯರ್ಥಿ ಘೋಷಣೆ ಅಸಾಧ್ಯ. ಅನಿತಾ ಕುಮಾರಸ್ವಾಮಿ ಎರಡು ಬಾರಿ ಕ್ಷೇತ್ರದಲ್ಲಿ ಸೋಲುಕಂಡಿದ್ದಾರೆ. ಈ ಬಾರಿ ಸ್ಪರ್ಧಿಸುವ ಆಕಾಂಕ್ಷೆ ಸಹ ಹೊಂದಿದ್ದಾರೆ. ಆದರೆ ಹಳ್ಳಿ ಹಳ್ಳಿಗೆ ನೀವು ಹೋಗಿ, ಅನಿತಾ ಬಂದ್ರೆ ಜೊತೆಗೆ ಕರೆದುಕೊಂಡು ಹೋಗಿ, ಅಂತಿಮ ನಿರ್ಧಾರ ಆ ಮೇಲೆ ಮಾಡೋಣ.
Comments