ಪ್ರಜ್ವಲ್ ರಾಜಕೀಯದ ಬಗ್ಗೆ ದೇವೇಗೌಡರ ಅಚ್ಚರಿ ಹೇಳಿಕೆ

ನಗರದಲ್ಲಿ ನಡೆಯುತ್ತಿರು ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿರುವ ದೇವೇಗೌರು ತಮ್ಮ ಮೊಮ್ಮಗನ ಬೆನ್ನಿಗೆ ನಿಂತಿದ್ದಾರೆ.
ಇನ್ನು ಪಕ್ಷದಲ್ಲಿ ಪ್ರಜ್ವಲ್ ರೇವಣ್ಣ ಹೆಚ್ಚಿನ ಕೆಲಸ ಮಾಡಬೇಕಿದ್ದು ಈ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದರು, ಇದಕ್ಕೆ ಪ್ರಜ್ವಲ್ ಬೇರೆ ಬೇರೆ ರೀತಿಯಿಂದ ಟಿಕೆಟ್ಗಾಗಿ ಪ್ರಯತ್ನಿಸಿದಾಗ ಪಕ್ಷದಿಂದಲೇ ಕಿತ್ತಾಕುವುದಾಗಿ ವಾರ್ನಿಂಗ್ ಮಾಡಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ರಾಜಕೀಯಕ್ಕೆ ಬಂದರೇ ತಪ್ಪೇನು…? ಅವನು ನನ್ನ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾನೆ, ರಾಜಕೀಯಕ್ಕೆ ಬರಲು ಅವನೇನು ಹಿಂಬಾಗಿಲಿನಿಂದ ಪ್ರಯತ್ನಿಸಿಲ್ಲ ಎನ್ನುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
Comments