ನಿಜಲಿಂಗಪ್ಪಾರಿಗೆ ಭಾರತರತ್ನ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ, ಸಿಎಂ
ಬೆಂಗಳೂರು: ನಿಜಲಿಂಗಪ್ಪ ಅವರಿಗೆ ಭಾರತರತ್ನ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ದಿವಂಗತ ನಿಜಲಿಂಗಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.
ಬೆಂಗಳೂರು: ನಿಜಲಿಂಗಪ್ಪ ಅವರಿಗೆ ಭಾರತರತ್ನ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ದಿವಂಗತ ನಿಜಲಿಂಗಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.ಅಲ್ಲದೇ ದೆಹಲಿ ಪಾರ್ಲಿಮೆಂಟ್ ಆವರಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಿಜಲಿಂಗಪ್ಪಾ ಅವರು ದೇಶಕಂಡ ಅಪ್ರತಿಮ ನಾಯಕ. ರಾಜಕೀಯ ಜೀವನದಲ್ಲಿ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು ಅತ್ಯಂತ ಪ್ರಾಮಾಣಿಕವಾಗಿ ರಾಜಕಾರಣ ನಡೆಸಿದರು. ರಾಜ್ಯದಲ್ಲಿ ನೀರಾವರಿಗೆ ನೀಡಿರುವ ಕೊಡುಗೆ ಅಪಾರ. ರಾಜ್ಯದ ಪ್ರಜೆಗಳ ಸಮಸ್ಯೆಗೆ ಸದಾ ಸ್ಪಂದಿಸುತ್ತಿದ್ದರು. ಅವರು ಬರೀ ರಾಜ್ಯಕ್ಕೆ ನಾಯಕರಾಗಿರದೆ ರಾಷ್ಟ್ರಮಟ್ಟದ ನಾಯಕರು ಆಗಿದ್ದರು. ಅವತ್ತಿನ ಆಲ್ ಇಂಡಿಯಾ ಕಮಿಟಿಯ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರಿಗೆ ದೇಶದಲ್ಲಿ ಇನ್ನು ಉನ್ನತ ಸ್ಥಾನ ಸಿಗಬೇಕು. ಅಂತಹ ಉನ್ನತ ವ್ಯಕ್ತಿತ್ವವನ್ನು ಅವರು ಹೊಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಿಜಲಿಂಗಪ್ಪಾ ಅವರ 115ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ವಾಟಾಳ್ ನಾಗರಾಜ್ ಸಲ್ಲಿಸಿದ ಮನವಿಗೆ ಈ ಭರವಸೆ ನೀಡಿದರು.
Comments