ನಮ್ಮ ಶಕ್ತಿಯಿಂದಲೇ ನಾವು ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮ ಗುರಿ, ಸಮಾವೇಶದಲ್ಲಿ ದೇವೇಗೌಡ ಹೇಳಿಕೆ

ಬೆಂಗಳೂರು: ನಮ್ಮ ಶಕ್ತಿಯಿಂದಲೇ ನಾವು ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮ ಗುರಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು ಹೇಳಿದ್ದಾರೆ.
ಬೆಂಗಳೂರು: ನಮ್ಮ ಶಕ್ತಿಯಿಂದಲೇ ನಾವು ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮ ಗುರಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿದರು. ರಾಷ್ಟ್ರದ ಹಿರಿಯ
ಮುಸ್ಲಿಂ ನಾಯಕರಾದ ಫಾರುಕ್ ಅಬ್ದುಲ್ಲಾ ಭಾಗವಹಿಸಿದ್ದು ನಮ್ಮ ಶಕ್ತಿ .
ಜಾತ್ಯಾತೀತ ಜನತಾದಳ ನಮ್ಮ ಶಕ್ತಿಯಿಂದಲೇ ಅಧಿಕಾರಕ್ಕೆ ಬರಬೇಕು, ನಮ್ಮ ಪಕ್ಷವನ್ನು ನಾಮಾನಶೇಷ ಮಾಡುತ್ತೀವಿ ಎಂದು ಕೆಲವರು ಹೇಳಿದ್ದಾರೆ. ಅಂತವರಿಗೆ ಈ ಸಮಾವೇಶದಿಂದ ಉತ್ತರ ಸಿಕ್ಕಿದೆ. ಈ ರೀತಿಯ ಉತ್ತರ ಇನ್ನಷ್ಟು ಕೊಡಬೇಕು ಎಂದು ಹೇಳಿದರು. ನಮಗೆ ಬಹುಮತ ಬರದಿದ್ದರೆ ಬಿಜೆಪಿ ಜತೆ ಹೋಗುತ್ತಾರೆ ಎಂದು ಹೇಳುತ್ತಾರೆ. ಈ ಬಗ್ಗೆ ಇಂದು ತೀರ್ಮಾನ ಆಗಬೇಕಿದೆ. ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದರು ಅದಕ್ಕೆ ಕಾರಣ ಯಾರು? ಈಗ ಮುಖ್ಯಮಂತ್ರಿ ಆಗಿರುವವರು ಆವತ್ತು ನಮ್ಮ ಪಕ್ಷದ ನಾಯಕರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರ ಮೇಲೆ ದೇವೇಗೌಡ ಅವರು ವಾಗ್ದಾಳಿ ನಡೆಸಿದರು.
Comments