ಹೋರಾಟದ ರಣಕಹಳೆ : ಒಗ್ಗಟ್ಟಿನ ಯಾತ್ರೆ

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆ ಕಾಂಗ್ರಸ್ ನಾಯಕರುಗಳು 'ಒಗ್ಗಟ್ಟಿನ ಯಾತ್ರೆ' ಶುರು ಮಾಡಲಿದ್ದಾರೆ. ಆ ಯಾತ್ರೆ ಯಾವ ನಾಯಕರುಗಳ ಮಧ್ಯೆ ಅಂದರೆ, ಸಿಎಂ ಸಿದ್ದರಾಮಯ್ಯ ಹಾಗೂ ಪರಂ , ಇವರು ಮುಖಂಡರ ಮಧ್ಯೆ ಯಾತ್ರೆ ಶುರುವಾಗಲಿದೆ.
ಎಂದರೆ , ಮಾರ್ಚ್ 1ರಂದು ವಿಧಾನಸಭೆ ಚುನಾವಣೆಗಾಗಿ ಒಗ್ಗಟ್ಟಿನ ಯಾತ್ರೆ ಶುರುವಾಗ್ತಿದೆ. 1ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಇಬ್ಬರು ನಾಯಕರು ಜನರ ಗಮನ ಸೆಳೆಯಲಿದ್ದಾರೆ. ಈಗಾಗ್ಲೇ ನಮ್ಮಿಬ್ಬರ ಮಧ್ಯೆ ಯಾವುದೇ ಗೊಂದಲವಿಲ್ಲ ಎಂಬುದು ಸ್ಪಷ್ಟ ಪಡಿಸಿದ್ದು ಆಗಿದೆ. ಈ ಹಿಂದೆ ಇವರಿಬ್ಬರು ನಾಯಕರು ಭಿನ್ನಾಭಿಪ್ರಾಯಗಳಿಂದಲೇ ಸುದ್ದಿ ಮಾಡಿದ್ದರು. ಒಬ್ಬರನೊಬ್ಬರು ಮುನಿಸಿಕೊಂಡಿದ್ದರು. ನಿರಂತರವಾಗಿ ಭಿನ್ನಾಭಿಪ್ರಾಯಗಳು ಇವೆ ಎಂಬ ಮಾತುಗಳು ಕೇಳಿ ಬಂದಿದ್ದವು,
ಒಟ್ಟಿನಲ್ಲಿ ಪಕ್ಷಕ್ಕಾಗಿ ಒಗ್ಗಟ್ಟಿನ ಯಾತ್ರೆ ಶುರುವಾಗಲಿದೆ. ಜಿಲ್ಲಾ ನಾಯಕರ ಜತೆಗೆ ಸಭೆ ನಡೆಯಲಾಗಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರಿ ಪ್ರವಾಸ ಮಾಡುವ ಕ್ಷೇತ್ರಗಳನ್ನು ಹೊರೆತುಪಡಿಸಿ ಪಕ್ಷದ ವತಿಯಿಂದ ಕಾರ್ಯಾಧ್ಯಕ್ಷರ ಜತೆಗೂಡಿ ಪ್ರತ್ಯೇಕ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ.
Comments