ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ವಾಗ್ದಾಳಿ
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ನಗರಕ್ಕೆ ಕುಖ್ಯಾತಿ ಕಾಂಗ್ರೆಸ್ ಸರ್ಕಾರ ತಂದುಕೊಟ್ಟಿದೆ ಎಂದು ಆರ್. ಅಶೋಕ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಹಂನಿಂದ ಮೆರೆಯುತ್ತಿದೆ.ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಇಡೀ ದೇಶದಲ್ಲಿ ನಂ, 2 ಸ್ಥಾನಕ್ಕೇರಿಸಿದೆ ಎಂದರು.
ಕಾಂಗ್ರೆಸ್ ಅವರನ್ನು ಜನ ಬೆಂಬಲ ಮಾಡುವುದಿಲ್ಲ ಎಂದರು.ಖಾಸಗಿ ಪತ್ರಿಕೆಯೊಂದಕ್ಕೆ ಮಾತನಾಡಿರುವ ಅವರು, ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಕಿ.ಮೀ ಅಕ್ಕಿಗೆ 28ರೂಗಳನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ ಕ್ಷೀರಭಾಗ್ಯ ಯೋಜನೆಯಡಿ 2ರೂ ಪ್ರೋತ್ಸಾಹಧನ ನೀಡಲು ಹಿಂದಿನ ಬಿಜೆಪಿ ಸರ್ಕಾರ ಆರಂಭಿಸುತ್ತು. ಈ ಮೊತ್ತವನ್ನು 4 ರೂ.ಗೆ ಹೆಚ್ಚಿಸಿದ್ದೇ ಈ ಸರ್ಕಾರದ ಸಾಧನೆ. ಸಿದ್ದರಾಮಯ್ಯ ಸರಕಾರ ಒಂದು ರೀತಿಯಲ್ಲಿ ಚೈನಾ ಮಾಡೆಲ್ ಮತ್ತು ಡೂಪ್ಲಿಕೇಟ್ ಸರಕಾರ. ಸಿದ್ದರಾಮಯ್ಯ ಸಹ ಡೂಪ್ಲಿಕೇಟ್ ಸಿಎಂ.
ಸಿದ್ಧರಾಮಯ್ಯ ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳುವ ಚಾಳಿ ಅವರದು, ಸಿಎಂ ಸ್ಥಾನದಲ್ಲಿರುವ ವ್ಯಕ್ತಿಯ ಯಾವ ಘನತೆ, ಗಾಂಭೀರ್ಯವು ಸಿದ್ದರಾಮಯ್ಯ ಅಲರಲಿಲ್ಲ. 70ಲಕ್ಷ ರೂ ಮೌಲ್ಯದ ವಾಚು , ಲಕ್ಷಾಂತರ ಬೆಲೆಯ ಶೂ, ಕನ್ನಡಕ ಹಾಕಿಕೊಂಡು ನಾನೊಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುತ್ತಾರೆ.
Comments