ಪ್ರಜಾಕೀಯ ಪಕ್ಷದ ಗುರುತು ಆಟೋ ಚಿಹ್ನೆ
ನಮ್ಮ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ ದೊರೆತಿದೆ. ಆ ಕಾರಣಕ್ಕೆ ಸುದ್ದಿಗೋಷ್ಠಿಗೆ ಆಟೋ ಮೂಲಕ ಬಂದಿರುವುದಾಗಿ ಹೇಳಿದರು. ಆಟೋ ಎಂದಾಕ್ಷಣ ಎಲ್ಲರಿಗೂ ಶಂಕರ್ ನಾಗ್ ನೆನಪಾಗುತ್ತಾರೆ. ಶಂಕರ್ ನಾಗ್ ಅವರಿಗೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕನಸಿತ್ತು. ನಮ್ಮೆಲ್ಲರ ನೆಚ್ಚಿನ ನಟ ಶಂಕರ್ ನಾಗ್ ಕನಸನ್ನು ನನಸು ಮಾಡಬೇಕಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಜಾಕೀಯ ಕೆಲಸ ಮಾಡಲಿದೆ ಎಂದು ನಟ ಉಪೇಂದ್ರ ಹೇಳಿದರು.
ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳಿಂದ ಚುನಾವಣೆ ವ್ಯವಸ್ಥೆ ದೂರವಿರಬೇಕು. ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ ಸೇವೆ, ಜನ ಸೇವೆ ಉದ್ದೇಶವನ್ನು ಪ್ರಜಾಕೀಯ ಪಕ್ಷ ಹೊಂದಿದೆ ಎಂದು ನಟ ಉಪೇಂದ್ರ ಹೇಳಿದರು. ನಾನು ಓರ್ವ ನಾಗರಿಕನಾಗಿ ಸುಮ್ಮನೆ ಕುಳಿತುಕೊಳ್ಳಬಾರದು ಎಂಬ ಕಾರಣಕ್ಕೆ ಬಂದಿದ್ದೇನೆ. ರಾಜ್ಯದ ೨೨೪ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆ, ಅವರ ಸರಿ-ತಪ್ಪುಗಳಿಗೆ ನಾನೇ ಹೊಣೆ ಎಂದು ನಟ ಉಪೇಂದ್ರ ಹೇಳಿದರು.
Comments