ರವಿ ಬೆಳಗೆರೆ ಬಂಧನದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

ರವಿ ಬೆಳಗೆರೆಯವರನ್ನು ಏತಕ್ಕಾಗಿ ಬಂಧಿಸಿದ್ದಾರೆಂದು ಗೊತ್ತಿಲ್ಲ. ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ" ಎಂದರು. ರವಿ ಬೆಳಗೆರೆ ಬಂಧನದ ಬಗ್ಗೆ ಪೊಲೀಸರೊಂದಿಗೆ ಮಾತನಾಡಿಲ್ಲ ಮತ್ತು ಯಾವುದೇ ಚರ್ಚಿಸಿಲ್ಲ. ಏನೇ ಇದ್ದರೂ ಪೊಲೀಸರೂ ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಪ್ ಶೂಟರ್ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡ ಎಂಬಾತನನ್ನು ಹೊಸೂರಿನ ಲಾಡ್ಜಿನಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವೆಪನ್ ಡೀಲರ್ ವಿಜಯಪುರದ ಚಡಚಣದ ಶಶಿಧರ ಮುಂಡೆವಾಡಗಿ ಎನ್ನುವಾತ ಹೇಸರು ಹೇಳಿದ್ದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಳಿಕ ಶಶಿಧರ ಮುಂಡೆವಾಡಗಿ ಎಂಬಾತನನ್ನು ಡಿಸೆಂಬರ್ 07ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ರವಿ ಬೆಳಗೆರೆ ಅವರು ಸುಪಾರಿ ನೀಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಯಲ್ಲಿ ರವಿ ಬೆಳಗೆರೆಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Comments