ಜೆಡಿಎಸ್ ಸರ್ಕಾರ ತರಲೇಬೇಕೆಂದು ಜನರು ಮನಸ್ಸು ಮಾಡಿದ್ದಾರೆ: ಅನಿತಾಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿಯವರ ಪರವಾದ ಅಲೆ ಇದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಈ ಭಾರಿ ರೈತರ ಪರವಾದ ಸರ್ಕಾರ ತರಲೇಬೇಕೆಂದು ಜನರು ಮನಸ್ಸು ಮಾಡಿದ್ದಾರೆಂದು ಅನಿತಾ ಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲಿ ಹೇಳಿದರು. ಚನ್ನಪಟ್ಟಣದ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ರೈತರ, ಕಾರ್ಮಿಕರ, ಶೋಷಿತರ ಪರವಾದ ಹಲವು ಯೋಜನೆಗಳನ್ನ ಎಚ್.ಡಿ.ಕುಮಾರಸ್ವಾಮಿಯವರು ತರಲಿದ್ದಾರೆ ಎಂದರು.
ಮುಖ್ಯವಾಗಿ ರೈತರ ಸಾಲವನ್ನ ಕುಮಾರಸ್ವಾಮಿಯವರ ಸರ್ಕಾರ ಬಂದ 24 ಗಂಟೆಯೊಳಗೆ ಮನ್ನಾ ಮಾಡಲಿದ್ದಾರೆ. ರಾಜ್ಯ ಸರ್ವತೋಮುಖ ಅಭಿವೃದ್ಧಿಯತ್ತ ಸಾಗಬೇಕಾದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂಬುದು ರಾಜ್ಯದ ಜನರ ಅಭಿಪ್ರಾಯವಾಗಿದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.
Comments