ಶಾಸಕ ಉಮೇಶ್ ಕತ್ತಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ತೆರೆಬಿದ್ದಿದೆ

ಬೆಳಗಾವಿಯ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಇದೀಗ ತೆರೆಬಿದ್ದಿದೆ. "ನಾನು ಬಿಜೆಪಿಯಲ್ಲೆ ಇರ್ತೇನೆ, ಕಾಂಗ್ರೆಸ್ ಸೇರುವ ಪ್ರಶ್ನಯೇ ಇಲ್ಲ" ಎಂದು ತಮ್ಮ ಮೇಲೆ ಎದ್ದಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಮೇಶ್ ಕತ್ತಿ ಅವರ ಮನೆಗೆ ಹೋಗಿ ಕುಶಲೋಪರಿ ವಿಚಾರಿಸಿದ್ದರು. ಇದಾದ ಬಳಿಕ 'ಸಿದ್ದರಾಮಯ್ಯ ಅವರು ಉಮೇಶ್ ಕತ್ತಿ ಅವರನ್ನು ಪಕ್ಷಕ್ಕೆ ಕರೆತರಲು ಗಾಳ ಹಾಕಲು ಬಂದಿದ್ದರು' ಎಂದು ಜಿಲ್ಲೆಯಲ್ಲಿ ಗುಸು-ಗುಸು ಮಾತುಗಳು ಶುರುವಾಗಿದ್ದವು. ಈ ಗುಸು-ಗುಸು ಮಾತುಗಳೆಲ್ಲವು ಉಮೇಶ್ ಕತ್ತಿ ಕಿವಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.
Comments