"ಪಿಕ್ ಪಾಕೆಟ್" ಸರ್ಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ಬಗ್ಗೆ ಗಂಭೀರ ಮಾಡಿದ್ದಾರೆ, ಪಕ್ಷದ ಜೆಪಿ ಭವನದಲ್ಲಿ ಟೆಕೆಟ್ ಆಕಾಂಕ್ಷಿಗಳ ಸಭೆಯ ಬಳಿಕ ಮಾತನಾಡಿರುವ ಅವರು, ರಾಜ್ಯದಲ್ಲಿ ಇರುವ ಸರ್ಕಾರ "ಪಿಕ್ ಪಾಕೆಟ್ ಸರ್ಕಾರ" ಎಂದರಲ್ಲದೆ, ಕುಡುಕರ ಜೇಬಿನಿಂದ ಪಿಕ್ ಪಾಕೆಟ್ ಮಾಡಲಾಗುತ್ತದೆ ಎಂದು ಆರೋಪ ಮಾಡಿದ್ದಾರೆ.
ಮದ್ಯದ ಮೇಲೆ ಮನಸ್ಸಿಗೆ ಬಂದತೆ ತೆರಿಗೆ ವಿಧಿಸಿರುವ ರಾಜ್ಯ ಸರ್ಕಾರ, 10 ರೂ ಮದ್ಯವನ್ನು 70 ರೂಗೆ ಮಾರಾಟ ಮಾಡಿ ಕುಡುಕರ ಜೇಬಿನಿಂದ ಪಿಕ್ ಪಾಕೆಟ್ ಮಾಡಲಾಗುತ್ತಿದೆ, ಈ ಹಣದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ನಾಲ್ಕು ವರ್ಷದಲ್ಲಿ 1.28 ಲಕ್ಷ ಕೋಟಿ ಸಾಲ ಮಾಡಿ ದಿವಾಳಿತನ ಪ್ರದರ್ಶಿಸಿದೆ ಎಂದು ವ್ಯಂಗ್ಯ ವಾಡಿದರು. ಹಾಗೇ, ಸರ್ಕಾರಿ ಕಾರ್ಯಕ್ರಮಗಳಿಗೆ ವರ್ಷಕ್ಕೆ 500 ಕೋಟಿ ರೂ ಜಾಹೀರಾತು ನೀಡುತ್ತಿದ್ದಾರೆ. ಇದು ಅಗತ್ಯವಿದೆಯಾ? ಎದು ಹೆಚ್ ಡಿಕೆ ಹೇಳಿದರು.
Comments