ಅಯ್ಯರ್ ಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ 'ನೀಚ್ ಆದ್ಮಿ' ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದು, ಇದಕ್ಕೆ ಸೂರತ್ ಚುನಾವಣಾ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿದ ಮೋದಿ, 'ಹೌದು ನಾನು ನೀಚ ಜಾತಿಯವನು. ಅವರು ಮೊಘಲ್ ಮೆಂಟಾಲಿಟಿಯವರು' ಎಂದು ತಿರುಗೇಟು ನೀಡಿದ್ದಾರೆ
'ನಾನು ಕೆಳ ಜಾತಿಯಲ್ಲಿ ಜನಿಸಿರಬಹುದು. ನನಗೆ ಅವರಂತೆ ಕೀಳುಮಟ್ಟದಲ್ಲಿ ಮಾತನಾಡಲು ಬರುವುದಿಲ್ಲ. ಮಣಿಶಂಕರ್ ಅಯ್ಯರ್ ಇಂತಹ ಹೇಳಿಕೆ ನೀಡುವ ಮೂಲಕ ಗುಜರಾತಿಗಳು, ಭಾರತೀಯರಿಗೆ ಅವಮಾನ ಮಾಡಿದ್ದಾರೆ. ಅವರಿಗೆ ತಿರುಗೇಟು ನೀಡಲು ನೀವು ಬಿ.ಜೆ.ಪಿ.ಗೆ ಮತ ನೀಡಿ' ಎಂದು ಮನವಿ ಮಾಡಿದ್ದಾರೆ. ಮಣಿಶಂಕರ್ ಹೇಳಿಕೆಗೆ ಆಕ್ಷೇಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಮೋದಿಯವರ ಕ್ಷಮೆಯಾಚಿಸುವಂತೆ ಸೂಚನೆ ನೀಡಿದ್ದಾರೆ'. ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಯ್ಯರ್ ಕ್ಷಮೆ ಕೇಳದಿರಲು ತೀರ್ಮಾನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಯ್ಯರ್ ನೀಡಿದ್ದ ಚಾಯ್ ವಾಲಾ ಹೇಳಿಕೆಯನ್ನೇ ಬಿ.ಜೆ.ಪಿ. ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡಿತ್ತು.
Comments