ಮದುವೆಯಲ್ಲಿ ಸಂಪತ್ತಿನ ತೋರ್ಪಡಿಕೆ ಸರಿಯಲ್ಲ : ಸಿಎಂ ಸಿದ್ದರಾಮಯ್ಯ

07 Dec 2017 3:33 PM | Politics
252 Report

ನಾಗಮಂಗಲದ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಪುತ್ರಿಯ ವಿವಾಹದ ವಿಡಿಯೊ ಆಮಂತ್ರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಶಿರಸಿಯಲ್ಲಿ ಮಾತನಾಡಿದ ಅವರು, 'ಮದುವೆಯಲ್ಲಿ ಸಂಪತ್ತಿನ ತೋರ್ಪಡಿಕೆ ಸರಿಯಲ್ಲ. ಇದು ಸಂಪತ್ತಿನ ಕೆಟ್ಟ ರೀತಿಯ ಪ್ರದರ್ಶನ. ನಾನಿದನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದೇನೆ. ರಾಜಕಾರಣಿ ಬೇರೆಯವರಿಗೆ ಮಾದರಿಯಾಗಿರಬೇಕು' ಎಂದು ಹೇಳಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಅವರ ಪುತ್ರಿಯ ವಿವಾಹದ ವಿಡಿಯೊ ಆಮಂತ್ರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

148 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ : ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ 56 ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. ₹ 148 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ರಿಮೋಟ್ ಒತ್ತುವ ಮೂಲಕ ಏಕಕಾಲಕ್ಕೆ ಚಾಲನೆ ನೀಡಿದರು. ಸಚಿವರಾದ ಆರ್.ವಿ. ದೇಶಪಾಂಡೆ, ಎಚ್.ಸಿ. ಮಹಾದೇವಪ್ಪ ಹಾಜರಿದ್ದರು. 

Edited By

Hema Latha

Reported By

Madhu shree

Comments