ಶಾಸಕ ಸೋಮಶೇಖರ್ ವಿರುದ್ದ ವಾರೆಂಟ್
ಕಾಂಗ್ರೆಸ್ ಶಾಸಕ ಎಂ. ಕೆ ಸೋಮಶೇಖರ್ ಅವರ ವಿರುದ್ಧ ಮೈಸೂರಿನ ಜೆಎಂಎಫ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರು ಸುಳ್ಳು ಮಾಹಿತಿ ನೀಡಿ ಗ್ಯಾಸ್ ಏಜೆನ್ಸಿ ಪಡೆದಿದ್ದಾರೆಂದು, ಮೈಸೂರು ಪಾಲಿಕೆ ಮಾಜಿ ಸದಸ್ಯ ಎಂ.ಸಿ.ಚಿಕ್ಕಣ್ಣನವರು ಆರೋಪ ಮಾಡಿದ್ದರು.
ಇದರ ವಿರುದ್ದ ಸೋಮಶೇಖರ್ ಸಹ ಪ್ರತಿ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ಚಿಕ್ಕಣ್ಣ ಅವರು ಸೋಮಶೇಖರ್ ವಿರುದ್ಧ ಮೈಸೂರಿನ ಜೆಎಂಎಫ್‍ಸಿ 3ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಇದೇ ಡಿಸೆಂಬರ್ 4ರಂದು ಸೋಮಶೇಖರ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗಲಿಲ್ಲ. ಆದ್ದರಿಂದ ನ್ಯಾಯಾಲಯ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಿದೆ.
Comments