ಪ್ರಧಾನಿ ಮೋದಿ ಬಗ್ಗೆ ಉಪ್ಪಿ ಹೇಳಿದ್ದೇನು ಗೊತ್ತಾ..?

07 Dec 2017 10:52 AM | Politics
307 Report

'ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ, ನಾನು ಪ್ರಾಕ್ಟಿಕಲ್ ಇಲ್ಲ, ಅಂತ ಜನ ನನ್ನನ್ನು ನೋಡಿ ನಗುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಲ್ಲಿ ನೋಡಿದರೆ ನಾನು ಪ್ರಾಕ್ಟಿಕಲ್ ಇಲ್ಲ. ಪ್ರಜೆಗಳು ಮಾತನಾಡುವ ಕಾಲ ಬಂದಿದೆ' ಎಂದು ಉಪ್ಪಿ ಹೇಳಿದರು.

'ಸತ್ಯಕ್ಕೆ ಸಾವಿಲ್ಲ ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸವಾಗಬೇಕಿಲ್ಲ, ನಾನು ಸ್ಮಾರ್ಟಾಗಿ ಕೆಲಸ ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್‍ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು' ಎಂದು ಹೇಳಿದರು. 'ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದು ತಿಳಿಸಿದರು. ಎಂಎಲ್‍ಎ ಸೀಟು ಗೆಲ್ಲಲು 50 ಕೋಟಿ ರೂಪಾಯಿ ಬೇಕು. ನನ್ನ ಬಳಿ ಕಾಸಿಲ್ಲ. ಆದರೆ ಕನಸಿದೆ. ಅದನ್ನು ಈಡೇರಿಸಲು ಜನ ಬೆಂಬಲ ಬೇಕಾಗಿದೆ' ಎಂದರು. 

Edited By

Hema Latha

Reported By

Madhu shree

Comments