ಅಂಬಿ ಕೋಪ ಯಾರ ಮೇಲೆ, ಪಕ್ಷದ ಮೇಲೋ ಅಥವಾ ರಮ್ಯಾ…?

ಮಂಡ್ಯ ಮುಖಂಡರೊಂದಿಗೆ ಹಾಜರಾಗುವಂತೆ ಅಂಬಿಗೆ ಖುದ್ದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರೇ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆದರೆ, ವೇಣು ಆಹ್ವಾನಕ್ಕೂ ಅಂಬಿ ಕ್ಯಾರೆ ಎನ್ನದೆ ಸಭೆಯಲ್ಲಿ ಗೈರಾಗಿದ್ದಾರೆ.
ಹೈಕಮಾಂಡ್ ಸೂಚನೆಯಂತೆ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನ ಸ್ಟಾರ್ ಪ್ರಚಾರಕಿಯಾಗಿ ರಮ್ಯಾ ನೇಮಕಗೊಂಡಿದ್ದಾರೆ. ರಮ್ಯಾ ಅವರ ಹುಟ್ಟುಹಬ್ಬದ ವೇಳೆ ಮಂಡ್ಯದಲ್ಲಿ ಹಾಕಲಾದ ಫ್ಲೆಕ್ಸ್ಗಳಲ್ಲಿ ಸ್ಥಳೀಯ ಮತ್ತು ರಾಜ್ಯ ನಾಯಕರ ಫೋಟೋಗಳು ಇದ್ದರೂ ಅಂಬರೀಷ್ ಫೋಟೊ ಇರಲಿಲ್ಲ. ಮಂಡ್ಯ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅಂಬಿ 'ಯಾರಿಗಾದರೂ ಟಿಕೆಟ್ ನೀಡಲಿ, ನಾನು ಅವರ ಪರ ಕೆಲಸ ಮಾಡುತ್ತೇನೆ. ಪಕ್ಷದ ಕೆಲಸ ನಿರ್ವಹಿಸುತ್ತೇನೆ' ಎಂದು ಜಾಣ್ಮೆಯಿಂದ ಹೇಳಿದ್ದರು.
Comments