ತಲೆ ಕಡಿದು ತಂದವರಿಗೆ 10 ಲಕ್ಷ ರೂ. ಬಹುಮಾನ : ಬಿಜೆಪಿ, ಜೆಡಿಎಸ್ ಘೋಷಣೆ

ಮೌಲ್ವಿ ತಲೆ ಕಡಿದು ತಂದವರಿಗೆ 10 ಲಕ್ಷ ರೂ. ಬಹುಮಾನವನ್ನು ಯುವ ಬಿಜೆಪಿ ಘೋಷಿಸಿದರೆ, ಮತ್ತೊಂದೆಡೆ ಸಂಸದ ಪ್ರತಾಪ್ಸಿಂಹ ತಲೆ ತೆಗೆದವರಿಗೆ ಅಷ್ಟೇ ಮೊತ್ತದ ಬಹುಮಾನ ನೀಡುವುದಾಗಿ ಜೆಡಿಎಸ್ ಘೋಷಿಸಿದೆ.
ಹುಣಸೂರಿನಲ್ಲಿ ಸಂಸದ ಪ್ರತಾಪ್ಸಿಂಹ ಬಂಧನ ಖಂಡಿಸಿ ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯನ್ನು ಪಾಕಿಸ್ತಾನವೆಂದ ಮೌಲ್ವಿ ಭಾರತದಲ್ಲಿರಲು ಅನರ್ಹರು. ಮೌಲ್ವಿ ತಲೆ ತುಂಡರಿಸಿದವರಿಗೆ 10 ಲಕ್ಷ ರೂ. ಬಹುಮಾನವನ್ನು ಬಿಜೆಪಿ ಯುವ ಮೋರ್ಚಾ ನೀಡಲಿದೆ ಎಂದರು. ಮತ್ತೊಂದೆಡೆ ಕಿತ್ತೂರುರಾಣಿ ಚೆನ್ನಮ್ಮನ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆನ್ನಲಾದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹನ ತಲೆ ತೆಗೆದರೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಬಾಗಲಕೋಟೆ ಜಿಲ್ಲಾ ಜೆಡಿಎಸ್ ಮುಖಂಡ ಶಿವಕುಮಾರ ಗದ್ದಿ ಘೋಷಿಸಿದ್ದಾರೆ.
Comments