ರೈತರ ಸಂಕಷ್ಟ ಪರಿಹಾರಕ್ಕೆ ದೇವೇಗೌಡರು ಸೂಚಿಸಿದ ತಂತ್ರಜ್ಞಾನ ಯಾವುದು ಗೊತ್ತಾ?

ರೈತರ ಸಾಲ ಮನ್ನಾ ಮಾಡಿ ಎಂದು ಇನ್ನೊಬ್ಬರ ಮನೆ ಮುಂದೆ ನಿಲ್ಲಬಾರದು, ಸಾಲ ಮನ್ನಾವನ್ನು ಒಂದು ಬಾರಿ ಮಾಡಬಹುದು. ಆದರೆ, ಅದು ಶಾಶ್ವತ ಪರಿಹಾರ ಅಲ್ಲವೆಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಬಳ್ಳಾರಿಯ ಕಮ್ಮ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಆದಾಯವನ್ನು ಹೆಚ್ಚಿಸುವಂತ ಯೋಜನೆಗಳು ಬೇಕು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಸ್ರೇಲ್ ಕೃಷಿ ತಂತ್ರಜ್ಞಾನದ ಮೂಲಕ ಆ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.ಬೆಳೆ ನಷ್ಟ, ಸಾಲದ ಹೊರೆ ಎಂದು ರೈತರು ಕಣ್ಣೀರು ಹಾಕುವುದು ಹೋಗಬೇಕು. ಅದಕ್ಕೆಂದು ಒಂದು ಬಾರಿ ಮಾತ್ರ ಸಾಲ ಸಂಪೂರ್ಣ ಮಾಡಬಹುದು. ಆದರೆ ಇದು ಪುನರಾವರ್ತನೆ ಆಗದು. ಶ್ರಮವಹಿಸಿ ದುಡಿಯಲು ರೈತರು ಸಿದ್ಧರಿದ್ದು, ಆತನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವಂತೆ ಶಕ್ತಿ ತುಂಬಬೇಕಿದೆ. ಒಂದು ಕುಟುಂಬದಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ಆದಾಯ ತರುವಂತ ಕೃಷಿ ಪದ್ಧತಿ ಬೇಕು. ಹಾಗಾಗಿಯೇ ಕುಮಾರಸ್ವಾಮಿ ಅವರಿಗೆ ಇಸ್ರೇಲ್ ಕೃಷಿ ತಂತ್ರಜ್ಞಾನ ಅರಿತುಕೊಂಡು ಬರಲು ಹೇಳಿದ್ದೆ ಎಂದರು.
Comments