ಕಾಂಗ್ರೆಸ್ ಮುಖಂಡ ಸೇರಿದಂತೆ ಹಲವರು ಜೆಡಿಎಸ್ ಗೆ ಸೇರ್ಪಡೆ
ಬಳ್ಳಾರಿಯ ಕಮ್ಮ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರತಾಪ್ ರೆಡ್ಡಿ ಸೇರಿದಂತೆ ಹಲವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಳ್ಳಾರಿಯ ಕಮ್ಮ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು,ರಾಜದ್ಯದಲ್ಲಿ ಲಿಂಗಾಯತ ಸಮುದಾಯದಲ್ಲಿನ ಐಕ್ಯತೆಯನ್ನು ಈ ಸರ್ಕಾರ ಒಡೆದಿದೆ. ಲಿಂಗಾಯಿತರನ್ನು ಮೂರು ಗುಂಪು ಮಾಡಿದೆ. ಸ್ವತಃ ಸಚಿವರನ್ನು ಕಳಿಸಿ ಈ ಕೆಲಸ ಮಾಡಿದೆ ಎಂದು ಆರೋಪಿಸಿದ ದೇವೇಗೌಡರು, ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಲು ಈ ಮೊದಲು ಪಕ್ಷದಲ್ಲಿದ್ದ ಹಳೇ ಸ್ನೇಹಿತರೆಲ್ಲ ಒಟ್ಟಾಗಿ ಬನ್ನಿ ಎಂದು ಆಹ್ವಾನ ಇಟ್ಟರು.
ಪಕ್ಷದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ನಿರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಈ ಮೊದಲು ಅನುದಾನ ದೊರೆಯುತ್ತಿರಲಿಲ್ಲ. ದೇವೇಗೌಡರು ಪ್ರಧಾನಿಯಾದ ಮೇಲೆ ಅದನ್ನು ಬದಲಿಸಿ ರಾಜ್ಯಗಳಿಗೆ ಅನುದಾನ ನೀಡುವ ಪದ್ಧತಿ ಬಂತು. ಇದರಿಂದ ಕಳೆದ 21 ವರ್ಷದಲ್ಲಿ ಕರ್ನಾಟಕಕ್ಕೆ 25 ಸಾವಿರ ಕೋಟಿ ರೂಪಾಯಿ ಅನುದಾನ ದೊರೆತಿದೆ ಎಂದರು.ಗಣಿ ಅಕ್ರಮಗಳನ್ನು ತನಿಖೆ ಮಾಡಿ ತಪ್ಪಿತಸ್ಥರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿ, ದಂಡ ವಸೂಲಿ ಮಾಡಲಿದೆ ಎಂದು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಏನು ಮಾಡಿದ್ದಾರೆ, ಅವರ ಜೊತೆ ಇವರೂ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದರು.
Comments