ಅಭಿಮಾನಿಯ ಮನೆಗೆ ಬಂದು ನೂತನ ದಂಪತಿಗೆ ಹಾರೈಸಿದ ಕುಮಾರಸ್ವಾಮಿ
ಮಂಡ್ಯ: ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ರವಿ ಎಂಬಾತರು ಕುಮಾರಸ್ವಾಮಿ ವಿವಾಹಕ್ಕೆ ಬರಲೇಬೇಕು ಎಂದು ಧರಣಿ ಕುಳಿತಿದ್ದರು. ಈ ಹಿನ್ನಲೆ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಮಂಡ್ಯ: ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ರವಿ ಎಂಬಾತರು ಕುಮಾರಸ್ವಾಮಿ ವಿವಾಹಕ್ಕೆ ಬರಲೇಬೇಕು ಎಂದು ಧರಣಿ ಕುಳಿತಿದ್ದರು. ಈ ಹಿನ್ನಲೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆದಕಾರಣ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ವಿವಾಹದ ಆಮಂತ್ರಣ ಕಳುಹಿಸಿದ್ದರು. ಇಂದು ನಡೆದ ಅಭಿಮಾನಿಯ ಮನೆಗೆ ಬಂದು ಎಚ್ ಡಿಕೆ ವಧುವರರನ್ನು ಆಶಿರ್ವದಿಸಿದ್ದಾರೆ.
ರವಿ ಎಂಬಾತರಿಗೆ ತನ್ನ ಅಕ್ಕನ ಮಗಳ ಜತೆಗೆ ಡಿ.೧ರಂದು ವಿವಾಹ ನಿಗದಿಯಾಗಿತ್ತು. ಆದರೆ ಗ್ರಾಮದ ಮುಖಂಡರೊಬ್ಬರು ಮದುವೆಗೆ ಅವರನ್ನು ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ರವಿಯ ಜತೆಗೆ ಮೊಬೈಲ್ ನಲ್ಲಿ ಮಾತನಾಡಿದ್ದ ಎಚ್ ಡಿಕೆ ಮದುವೆಗೆ ಬರಲಾಗುವುದಿಲ್ಲ ಆದರೆ ಮದುವೆ ನಂತರ ಮನೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದರು. ತನ್ನ ನೆಚ್ಚಿನ ನಾಯಕನ ಮಾತು ಕೇಳಿ ರವಿ ಧರಣಿ ಬಿಟ್ಟು ಮದುವೆಯಾಗಿದ್ದರು. ಕೊಟ್ಟ ಮಾತಿನ ಪ್ರಕಾರ ಕುಮಾರಸ್ವಾಮಿ ಅವಕು ಅಭಿಮಾನಿಯ ಮನೆಗೆ ಬಂದು ಶುಭ ಕೋರಿದ್ದಾರೆ.
Comments