ಜೆಡಿಎಸ್ ಪಕ್ಷವನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ : ಹೆಚ್.ಡಿ.ದೇವೇಗೌಡ

'ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಆಶೀರ್ವದಿಸಿ, ಅಧಿಕಾರ ಸೂತ್ರ ಹಿಡಿಯುವಂತೆ ಮಾಡಬೇಕು ಎಂದು ನಾಡಿನ ಜನತೆಯ ಬಳಿ ತೆರಳಿ, ಕೈ ಒಡ್ಡಿ ಬೇಡುತ್ತೇನೆ. ಮತದಾರ ಪ್ರಭುಗಳ ಬಲ-ಬೆಂಬಲವೇ ನಮಗೆ ಶ್ರೀರಕ್ಷೆ, ಜೆಡಿಎಸ್ ಪಕ್ಷ ಖಂಡಿತವಾಗಿಯೂ ಅಧಿಕಾರ ಗದ್ದುಗೆ ಹಿಡಿಯಲಿದೆ' ಎಂದು ಹೇಳಿದರು. ಜೆಡಿಎಸ್ ಪಕ್ಷವನ್ನು ತುಳಿಯಲು ನಡೆದಿರುವ ಷಡ್ಯಂತ್ರ, ಹುನ್ನಾರಗಳಿಂದ ಜೆಡಿಎಸ್ ಅನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೆಚ್.ಡಿ.ದೇವೇಗೌಡರು ಗುಡುಗಿದರು.
ಬಳ್ಳಾರಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಸೇರಿಕೊಳ್ಳಲು ಅನೇಕ ಜನ ಪ್ರಮುಖರು ಉತ್ಸಾಹದಿಂದ ಇದ್ದಾರೆ. ನಾಡಿನ ಹಿತಕ್ಕಾಗಿ ರಾಜ್ಯದಲ್ಲಿ ರೈತರು, ಕಾರ್ಮಿಕರು ಸೇರಿದಂತೆ ಎಲ್ಲರ ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ರಾಜಕೀಯ ಧ್ರುವೀಕರಣ ,ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ದೇಶದ ಹಾಗೂ ರಾಜ್ಯದ ರಾಜಕೀಯದಲ್ಲಿ ಬೆಳವಣಿಗೆಗಳಾಗಲಿವೆ. ಜನತಾ ಧ್ರುವೀಕರಣ ನಡೆಯಲಿದೆ. ಈ ಹಿಂದಿನ ಜನತಾ ಪರಿವಾರದ ಹಲವಾರು ಮುಖಂಡರು ಮತ್ತೆ ಒಂದಾಗಿ ಸೇರಬೇಕು ಎಂದುಕೊಂಡರೂ ಆಶ್ಚರ್ಯವಿಲ್ಲವೆಂದು ದೇವೇಗೌಡ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಜೆಡಿಎಸ್ ಅಧ್ಯಕ್ಷ ಕೆ.ಶಿವಪ್ಪ, ಮಾಜಿ ಬುಡಾ ಅಧ್ಯಕ್ಷ ಪ್ರತಾಪ್ ರೆಡ್ಡಿ, ಮೀನಳ್ಳಿ ತಾಯಣ್ಣ ಮತ್ತಿತರೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Comments