ವನಿತೆಯರ ಕ್ರಿಕೆಟ್: ಭಾರತಕ್ಕೆ 196 ರನ್ಗಳ ಗುರಿ
ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಬಾಂಗ್ಲಾ ಪರ ಇನ್ನಿಂಗ್ಸ್ ಆರಂಭಿಸಿದ ಸರ್ಮೀನ್ ಸುಲ್ತಾನಾ ಹಾಗೂ ಮುರಶೀದಾ ಖತೂನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಆದರೆ, ನಂತರ ಕ್ರೀಸ್ಗೆ ಬಂದ ಲತಾ ಮೊಂಡೋಲ್ ಅವರ 71 ರನ್ ಹಾಗೂ ನಾಯಕಿ ರೂಮಾನಾ ಅಹ್ಮದ್ ಅವರ 65 ರನ್ಗಳ ಸಹಾಯದಿಂದ ಬಾಂಗ್ಲಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು.
ಭಾರತದ ಪರ ಉತ್ತಮ ಬೌಲಿಂಗ್ ದಾಳಿ ಮಾಡಿದ ಸುಕನ್ಯಾ ಪರೀದಾ, ಎ ಎ ಪಾಟೀಲ್ ಹಾಗೂ ಶಿವಾಂಗ್ ರಾಜ್ ತಲಾ ಒಂದು ವಿಕೆಟ್ ಪಡೆದರು. ಈಗಾಗಲೇ ಮೊದಲ ಏಕದಿನ ಪಂದ್ಯ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿರುವ ಭಾರತ ಈ ಪಂದ್ಯವನ್ನು ಗೆದ್ದರೆ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
Comments