ಅಮ್ಮನಿಗೆ ಅಭಿಮಾನಿಗಳಿಂದ ಗೌರವ, ಶ್ರದ್ಧಾಂಜಲಿ ಸಮರ್ಪಣೆ
ಇನ್ನು ಜಯಲಲಿತಾ ಪುಣ್ಯತಿಥಿ ಆಚರಿಸಲು ಸಿಎಂ ಪಳನಿಸ್ವಾಮಿ ಸರ್ಕಾರ ಜಯಾ ಸ್ಮಾರಕದವರೆಗೆ ಶಾಂತಿಯುವ ಜಾಥಾ ಹಮ್ಮಿಕೊಂಡಿದೆ. ಹಾಗೆಯೇ ಶಶಿಕಲಾ ಬಣದ ಟಿಟಿವಿ ದಿನಕರನ್ ಅವರು ಜಯಾ ಸ್ಮಾರಕದ ಬಳಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಉಭಯ ಬಣಗಳ ನಾಯಕರು ತಮ್ಮ ಜನ ಬೆಂಬಲ ಪ್ರದರ್ಶಿಸಲು ಜಯಾ ಪುಣ್ಯತಿಥಿಯನ್ನು ಬಳಸಿಕೊಂಡಿದ್ದಾರೆ.
ಉಭಯ ಬಣಗಳ ಬೆಂಬಲಿಗರು ಅಮ್ಮನ ಪುಣ್ಯತಿಥಿ ಆಚರಣೆಗೆ ಚೆನ್ನೈಗೆ ಆಗಮಿಸುತ್ತಿದ್ದು, ನಗರದಲ್ಲಿ ಇಂದು ಭಾರಿ ಟ್ರಾಫಿಕ್ ಉಂಟಾಗುವ ಸಾಧ್ಯತೆ ಇದೆ. ಜಯಾ ಸ್ಮಾರಕಕ್ಕೆ ತಮಿಳುನಾಡಿನ ಸಿಎಂ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ, ದೀಪಾ ಜಯಕುಮಾರ್ ಸೇರಿದಂತೆ ಹಲವರು ಆಗಮಿಸಿ ನಮನ ಸಲ್ಲಿಸಲಿದ್ದಾರೆ.
Comments