ಒಬ್ಬರು ಬೆಂಕಿಕಡ್ಡಿ ಗೀರಿದರೆ, ಮತ್ತೊಬ್ಬರು ಸೀಮೆಎಣ್ಣೆ ಸುರೀತಾರೆ : ಕುಮಾರಸ್ವಾಮಿ ಆಕ್ರೋಶ

'ಹನುಮ ಜಯಂತಿ ವೇಳೆ ಕಾನೂನು ಉಲ್ಲಂಘನೆ ಮಾಡಿದ್ದು, ಆಂಜನೇಯ ಸ್ವಾಮಿಗೆ ಮಾಡಿದ ಅಪಮಾನ. ಪ್ರತಾಪ್ ಸಿಂಹ ಬ್ಯಾರಿಕೇಡ್ ಒಡೆದು ಹಾಕಿದ್ದು ಹಾಗೂ ಅವರ ವಿಡಿಯೋ ನೋಡಿದರೆ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ನಿರ್ದೇಶನ ಇರುವುದು ನಿಶ್ಚಳವಾಗಿದೆ' ಎಂದರು. ಒಬ್ಬರು ಬೆಂಕಿಕಡ್ಡಿ ಗೀರಿದರೆ, ಮತ್ತೊಬ್ಬರು ಸೀಮೆಎಣ್ಣೆ ಸುರೀತಾರೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
'ಅಮಿತ್ ಶಾ ಮೇಲೆಯೂ ಸರಕಾರ ಕೇಸು ಹಾಕಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ. ಕಾಂಗ್ರೆಸ್, ಬಿಜೆಪಿಯನ್ನು ಅಲ್ಪಸಂಖ್ಯಾತರ ವಿರೋಧಿ ಎನ್ನುತ್ತಿದೆ. ಜೆಡಿಎಸ್ ಮುಖಂಡರ ಬಗ್ಗೆ ಕೆಲ ಉರ್ದು ಪತ್ರಿಕೆಗಳಲ್ಲಿ ಉದ್ದೇಶಪೂರ್ವಕವಾಗಿ ಕೆಲವರು ಅವಹೇಳನಕಾರಿಯಾಗಿ ಬರೆಯುತ್ತಿದ್ದಾರೆ. ಈ ಬಗ್ಗೆ ಆ ಸಮುದಾಯದ ಮುಖ್ಯಸ್ಥರನ್ನು ಕರೆಸಿ ಈಗಾಗಲೇ ಬುದ್ಧಿವಾದ ಹೇಳಿಸಲಾಗಿದೆ' ಎಂದು ಕುಮಾರಸ್ವಾಮಿ ಹೇಳಿದರು. ಜ.9ಕ್ಕೆ ಮಂಗಳೂರಿನಲ್ಲಿ 'ಜೆಡಿಎಸ್ ನಡಿಗೆ ಸೌಹಾರ್ದತೆ ಕಡೆಗೆ' ರ್ಯಾಲಿ ನಡೆಸಲಾಗುವುದು ಎಂದ ಅವರು, ಡಿ.ಕೆ.ರವಿ ಅವರ ಮಾವ ಹನುಮಂತರಾಯಪ್ಪ ಜೆಡಿಎಸ್ ಸೇರ್ಪಡೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಟಿಕೆಟ್ ಹಂಚಿಕೆ ವಿಚಾರವಾಗಿ ನಾನು ಮತ್ತು ಪಕ್ಷದ ಹಿರಿಯ ನಾಯಕರೇ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. 'ಬಾಬಾಬುಡನ್ ಗಿರಿ ದತ್ತಪೀಠದ ವಿಚಾರದಲ್ಲಿ ಸರಕಾರ ಪೂರ್ಣ ವಿಫಲವಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ದತ್ತಪೀಠದ ವಿಚಾರದಲ್ಲಿ ಅಲ್ಲಿನ ಎಸ್ಪಿಗೆ ಆದೇಶ ನೀಡಿ ಡಿ.ವಿ.ಸದಾನಂದಗೌಡ ಅವರ ಬಂಧನಕ್ಕೆ ಆದೇಶ ಮಾಡಿದ್ದೆ. ಆದರೆ, ನಿನ್ನೆ ದತ್ತಪೀಠದಲ್ಲಿ ನಡೆದಿದ್ದನ್ನು ಗಮನಿಸಿದರೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸೋತಿದೆ' ಎಂದರು.
Comments